SHIVAMOGGA | MALENADUTODAY NEWS | ಮಲೆನಾಡು ಟುಡೆ Dec 26, 2024
ಸಾವಿಗೆ ಸಾವಿರ ದಾರಿ ಇರುವಂತೆ ಸಾವಿಗೆ ಸಾವಿರ ಕಾರಣಗಳೂ ಇರುತ್ತವಾ? ಹೌದು ಎನ್ನುವುದಕ್ಕೆ ಇಲ್ಲೊಂದು ಸಾಕ್ಷಿಯಿದೆ. ಇತ್ತೀಚೆಗೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆ ಲಿಮಿಟ್ಸ್‌ನಲ್ಲಿ ಅಜ್ಜಿ ಟಿವಿ ರಿಮೋಟ್ ವಿಚಾರದಲ್ಲಿ ಕಚ್ಚಾಡಿದಕ್ಕೆ ಬೈದಲು ಎಂಬ ಕಾರಣಕ್ಕೆ ಅಪ್ರಾಪ್ತ ಮೊಮ್ಮಗಳೊಬ್ಬಳು ಇಲಿ ಪಾಷಣ ತಿಂದು ಆತ್ಮಹತ್ಯೆ ಮಾಡಿಕೊಂಡಿದ್ದಳು ಕಳೆದ ಡಿಸೆಂಬರ್ 21 ರಂದು ಈ ಘಟನೆ ಯುವ ಜನಾಂಗದ ಮನಸ್ತಿತಿ ಬಗ್ಗೆ ಆತಂಕ ಮೂಡಿಸಿತ್ತು. ಇದರ ಬೆನ್ನಲ್ಲೆ ಶಿವಮೊಗ್ಗದಲ್ಲಿ ಇನ್ನೊಂದು ಘಟನೆ ನಡೆದಿದೆ. ಯುವತಿಯೊಬ್ಬಳು ಮೊಬೈಲ್ ವಿಚಾರಕ್ಕೆ ಕಳೆನಾಷಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಶಿವಮೊಗ್ಗದಲ್ಲಿಯೇ ಹೀಗೆನಾ ಅಥವಾ ಎಲ್ಲಡೆಯು ಹೀಗೆ ಆಗುತ್ತಿದೆಯಾ ಎಂಬುದೊಂದು ಅನುಮಾನವಿದೆ. ಕಳೆದ ಡಿಸೆಂಬರ್ 21 ರಂದು ಅಪ್ರಾಪ್ತೆಯೊಬ್ಬರು ರಿಮೋಟ್ ವಿಚಾರಕ್ಕೆ ಅಜ್ಜಿ ಬೈದ್ಲು ಎಂಬ ಒಂದೇ ಒಂದು ಕಾರಣಕ್ಕೆ ಇಲಿ ಪಾಷಾಣ ತಿಂದು ಸೂಸೈಡ್ ಮಾಡಿಕೊಂಡಿದ್ದಳು. ಈ ಘಟನೆ ನಡೆದು 10 ದಿನ ಕಳೆಯುವಷ್ಟರಲ್ಲಿ ಯುವತಿಯೊಬ್ಬಳು ಮೊಬೈಲ್ ಕಾರಣಕ್ಕೆ ಅಮ್ಮ ಬೈದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಶಿವಮೊಗ್ಗದ ಆಯನೂರು ಸಮೀಪ ಹಾರನಳ್ಳಿಯಲ್ಲಿ ಘಟನೆ ಇಂತಹದ್ದೊಂದು ಘಟನೆ ಸಂಭವಿಸಿದೆ. ಇಲ್ಲಿನ ಯುವತಿ ಧನುಶ್ರೀ (20) ಫಸ್ಟ್ ಇಯರ್ ಡಿಗ್ರಿ ಓದುತ್ತಿದ್ದಳು. ಚೆನ್ನಾಗಿಯೇ ಓದುತ್ತಿದ್ದ ಯುವತಿ ಕಳೆದ ಸೋಮವಾರ ಕಾಲೇಜು ಮುಗಿಸಿ ಮನೆಗೆ ಬಂದಿದ್ದ ಧನುಶ್ರೀ , ಮನೆ ಜಗುಲಿ ಮೇಲೆ ಕೂತು ಮೊಬೈಲ್ ನೋಡುತ್ತಿದ್ದಳು. ಈ ವೇಳೆ ಅದನ್ನ ಗಮನಿಸಿದ ತಾಯಿ, ಮೊಬೈಲ್‌ನಲ್ಲಿಯೇ ಮುಳುಗಿರಬೇಡ ಎಂದು ಬುದ್ದಿವಾದ ಹೇಳಿದ್ದಾಳೆ. ತಾಯಿಯ ಅಧಿಕಾರದಲ್ಲಿ ಆ ಹೆಣ್ಣುಮಗಳು ತುಸು ಘಟ್ಟಿದನಿಯಲ್ಲಿ ಮಾತನಾಡಿದ್ದಾಳೆ. ಆದರೆ ಧನುಶ್ರೀಗೆ ಅಮ್ಮನ ಮಾತೇ ಸಹ್ಯವಾಗಿರಲಿಲ್ಲ. ಅಮ್ಮನ ಬಾಯಿಗೆ ಆಯ್ತಮ್ಮ ಸರಿ ಎನ್ನುವ ಬದಲು ಮನೆಯೊಳಗೆ ಹೋದವಳೇ ಕಳೆನಾಷಕ ಗ್ರಾಮಕ್ಸಲ್ ನ್ನ ಕುಡಿದುಬಿಟ್ಟಿದ್ಧಾಳೆ.
ಇದನ್ನ ನೋಡಿದ ತಾಯಿ ಎದೆಹೊಡೆದುಕೊಂಡು ಅಲ್ಲಿ ಕುಸಿದಿದ್ದಳು. ಅಕ್ಕಪಕ್ಕದವರು ತಕ್ಷಣವೇ ಧನುಶ್ರಿಯನ್ನ ಆಯನೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆ ಕೊಡಿಸ್ತಿದ್ದರು. ಆದರೆ ಇವತ್ತು ಆಕೆ ಸಾವನ್ನಪ್ಪಿದ್ದಾಳೆ. ಮೊಬೈಲ್ ಬಗ್ಗೆ ಆಡಿದ ಮಾತು ತಪ್ಪೇನವ್ವ ಅಂತಾ ತಂದೆ ತಾಯಿ ಮಗಳ ಶವದ ಮುಂದೆ ತಪ್ಪಿತಸ್ತರಂತೆ ಅಳುತ್ತಿದ್ದರೇ, ಸಂಬಂಧಿಕರು ಈ ಸಾವು ನ್ಯಾಯವಾ? ಅಂತಾ ತಮ್ಮಲ್ಲೆ ಪ್ರಶ್ನಿಸುತ್ತಾ , ಯಾವ ತಂದೆ ತಾಯಿಗೂ ಈ ದುಃಖ ಕೊಡಬೇಡಪ್ಪ ದೇವರ್ರೆ ನಿನೀದ್ದರೇ ಎನ್ನುತ್ತಿದ್ದರು.
ಕಾಲದ ಕ್ರಮವನ್ನು ಬದಲಾಯಿಸಿದ ಕೊರೊನಾ, ಆನ್‌ಲೈನ್ ತರಗತಿಗಳಿಗೆ ಕಾರಣವಾಗಿತ್ತು. ಅದರ ಬೆನ್ನಲ್ಲೆ ವಿದ್ಯಾರ್ಥಿ ಸಮೂಹದ ಕಲಿಕೆಗೆ ಮೊಬೈಲ್ ಸಹ ಅನಿವಾರ್ಯವಾಯಿತು. ಆದರೆ ಅದೆ ಮೊಬೈಲ್ ಚಿಗುರುವ ವಯಸ್ಸಿನವರ ಮನಸ್ಸನ್ನ ಸೂಕ್ಷ್ಮವಾಗಿಸುತ್ತಿದೆ ಎನ್ನುವುದಕ್ಕೆ ಘಟನೆ ಸಾಕ್ಷಿಯಾಗಿದೆ. ಪೋಷಕರೇ ಮಕ್ಕಳ ಎದರು ಮಾತನಾಡಲು ಸಹ ಹೆದರುವ ಕಾಲ ಮುಂದೊಂದು ದಿನ ಬರಬಹುದೇನೋ ಎಂಬ ಶಂಕೆಯನ್ನು ಮೂಡಿಸ್ತಿರುವ ಘಟನೆ, ಜಾಗೃತಿಯ ಅವಶ್ಯಕತೆಯನ್ನು ಸಹ ತಿಳಿಸುತ್ತಿದೆ.
SUMMARY | Young woman commits suicide after being scolded by her mother over mobile phone
KEY WORDS | Young woman commits suicide over mobile phone issue