SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 27, 2024 | CRICKET | BCCI ಸೀಸನ್‌ಗಾಗಿ ರಾಜ್ಯದ ಅಂಡರ್ 19 ತಂಡಕ್ಕೆ ಶಿವಮೊಗ್ಗ ವಲಯದ ಲೋಹಿತ್ ಎಸ್ ಆಯ್ಕೆಯಾಗಿದ್ದಾರೆ. ನಿನ್ನೆಯಷ್ಟೆ ಆಯ್ಕೆಗಾರರು ಆಟಗಾರರ ಪಟ್ಟಿಯನ್ನ ರಿಲೀಸ್ ಮಾಡಿದ್ದು, ಶಿವಮೊಗ್ಗ ಕ್ರಿಕೆಟ್ ವಲಯದಲ್ಲಿ ಸಂತೋಷ ಮೂಡಿದೆ
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ನಿನ್ನೆ ದಿನ ಈ ಸೀಸನ್‌ಗೆ ಅಂಡರ್ 19 ಆಟಗಾರರ ಪಟ್ಟಿಯನ್ನ ರಿಲೀಸ್ ಮಾಡಿದೆ. ಈ ಪಟ್ಟಿಯಲ್ಲಿ ಧೀರಜ್ ಜೆ ಗೌಡ (ನಾಯಕ), ರವಿ ಕೈರವ್ ರೆಡ್ಡಿ, ಆದರ್ಶ್ ಡಿ ಅರಸ್ (ವಿಕೆಟ್ ಕೀಪರ್), ಶಿವಂ ಎಂಬಿ, ರೋಹಿತ್ ಆರ್ ವಾರಂಬಳ್ಳಿ , ಹಾರ್ದಿಕ್ ರಾಜ್ (ಉಪನಾಯಕ), ಸಿದ್ಧಾರ್ಥ್ ಎ , ಪ್ರಜ್ವಲ್ ಗೌಡ ಆರ್ , ಗೌರವ್ ಶಾನಭಾಗ್ , ವೈಭವ್ ಶರ್ಮಾ , ಮಹೇಶ್ ಕುಮಾರ್ ಬಂಗೇರ , ಪ್ರತೀಕ್ ಪಿ, ಲೋಹಿತ್ ಎಸ್ , ಅಕ್ಷತ್ ಪ್ರಭಾಕರ್, ಮಣಿಕಾಂತ್ ಶಿವಾನಂದ್‌ರನ್ನ ಆಯ್ಕೆ ಮಾಡಲಾಗಿದೆ.
ಈ ಹಿಂದೆ ಶಿವಮೊಗ್ಗದಲ್ಲಿ U19 ಕೂಚ್ ಬೆಹಾರ್ ಟ್ರೋಫಿ ಫೈನಲ್ಸ್ ನಡೆದಿತ್ತು. ಇದೀಗ ಈ ಸೀಸನ್ ವಿನೂ ಮಂಕಡ್ ಟ್ರೋಫಿ 2024-25 ಟ್ರೋಪಿಯ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಆಟಗಾರ ಆಯ್ಕೆಯಾಗಿರುವುದಕ್ಕೆ, ಸಹ್ಯಾದ್ರಿ ಕ್ರಿಕೆಟ್ ತರಭೇತಿ ಕೇಂದ್ರ ಕ್ರಿಕೆಟ್ ತರಬೇತುದಾರ ಪಿ.ವಿ. ನಾಗರಾಜ್ , ಕೆಎಸ್‌ಸಿಎ ಶಿವಮೊಗ್ಗ ವಲಯದ ಸಂಚಾಲಕರು ಸದಾನಂದ ಹೆಚ್ ಎಸ್ , Sahyadri Cricket Academy & Club FCC ಸಂತಸ ವ್ಯಕ್ತಪಡಿಸಿದ್ದಾರೆ.