SHIVAMOGGA | MALENADUTODAY NEWS | ಮಲೆನಾಡು ಟುಡೆ Feb 1, 2025
ನಕ್ಸಲ್ ಶರಣಾಗತಿಯ ಬಗ್ಗೆ ಮಲೆನಾಡು ಟುಡೆ ಈ ಹಿಂದೆ ನೀಡಿದ್ದ ವರದಿಯಂತೆ ಇವತ್ತು ಮತ್ತೊಬ್ಬ ನಕ್ಸಲ್ ಚಿಕ್ಕಮಗಳೂರಿನಲ್ಲಿ ಶರಣಾಗಲಿದ್ದಾನೆ. ಕೋಟೆ ರವೀಂದ್ರ ಶರಣಾಗುತ್ತಿರುವ ಹಾರ್ಡ್ ಕೋರ್ ನಕ್ಸಲ್. ಸದ್ಯ ರಾಜ್ಯದಲ್ಲಿ ಉಳಿದಿರುವ ಗುರುತಿಸಿದ ನಕ್ಸಲರ ಪೈಕಿ ಕೊನೆಯವರು ಈ ರವೀಂದ್ರ. ವಿಕ್ರಂಗೌಡನ ಎನ್‌ಕೌಂಟರ್ ಬಳಿಕ ಆರು ಮಂದಿ ನಕ್ಸಲರು ಶರಣಾಗಿದ್ದರು. ಅದಕ್ಕಾಗಿ ಸರ್ಕಾರವೇ ಮುಕ್ತ ವೇದಿಕೆಯನ್ನು ಒದಗಿಸಿಕೊಟ್ಟಿತ್ತು.
ಜನವರಿ 8 ರಂದು ಮಂಡಗಾರು ಲತಾ ಆಂಡ್ ಟೀಂ ಸಿಎಂ ಸಿದ್ದರಾಮಯ್ಯರ ಎದುರು ಸೆರೆಂಡರ್ ಆಗಿತ್ತು, ಆದರೆ ಕೋಟೆ ಹೊಂಡ ರವೀಂದ್ರ ಶರಣಾಗಿರಲಿಲ್ಲ. ಆ ಬಳಿಕ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು ರವೀಂದ್ರನನ್ನು ಸಂಪರ್ಕ ಮಾಡಿ ಅವರ ಮನವೊಲಿಸಿದ್ದರು, ಇದೀಗ ಕೋಟೆ ಹೊಂಡ ರವೀಂದ್ರ ಇವತ್ತು ಬೆಳಗ್ಗೆ ಹನ್ನೊಂದು ಗಂಟೆ ಸುಮಾರಿಗೆ ಚಿಕ್ಕಮಗಳೂರು ಎಸ್‌ಪಿ ಕಚೇರಿಗೆ ಬಂದು ಶರಣಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಮಲೆನಾಡು ಟುಡೆಗೆ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರ ಮೂಲಗಳು ಸ್ಪಷ್ಟಪಡಿಸಿವೆ. ಅಂದಹಾಗೆ, ಕೋಟೆಹೊಂಡ ರವೀಂದ್ರ ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕೋಟೆ ಹೊಂಡ ಗ್ರಾಮದವರು
ಶೃಂಗೇರಿಯ ನೆಮ್ಮಾರು ಫಾರೆಸ್ಟ್ ಐಬಿಯಲ್ಲಿ ಕೋಟೆ ಹೊಂಡ ರವೀಂದ್ರ ಈಗಾಗಲೇ ಶರಣಾಗಿದ್ದು, ಅವರನ್ನು ಶರಣಾಗತಿ ಪ್ರಕ್ರಿಯೆಗೆ ಒಳಪಡಿಸಲಾಗುತ್ತಿದೆ. ಈ ಬಗ್ಗೆ ಸರ್ಕಾರದ ಪ್ರಕಟಣೆಯು ಸಹ ಹೊರಬಿದ್ದಿದೆ
SUMMARY | Naxal Kote Honda Ravindra surrenders
KEY WORDS | Naxal Kote Honda Ravindra