SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 21, 2024
ಮೈಸೂರು ದಸರಾಕ್ಕೆ ಆನೆಗಳ ಪಡೆ ಸಿದ್ದವಾಗುತ್ತಿರುವ ನಡುವೆ ನಿನ್ನೆ ದಿನ ರಾತ್ರಿ ಅಲ್ಲಿ ನಡೆಯಬಾರದ ಘಟನೆ ನಡೆದಿದೆ. ಗಜಪಡೆಯ ನಡುವೆ ಕೆರಳಿದ ಧನಂಜಯ ಆನಗೆ ಕಂಜನ್ ಆನೆಯನ್ನ ಅಟ್ಟಾಡಿಸಿದೆ. ಹೀಗೆ ಅಟ್ಟಾಡಿಸಿಕೊಂಡು ರಸ್ತೆಯವರೆಗೂ ಬಂದಿದೆ. ಆನೆಗಳು ಘೀಳಿಡುತ್ತಾ ಓಡುವುದನ್ನ ನೋಡಿದ ಜನರು, ಬೀದಿ ವ್ಯಾಪಾರಿಗಳು ಸಹ ದಿಕ್ಕಾಪಾಲಾಗಿ ಓಡಿದ್ದಾರೆ.
ಮೈಸೂರು ಅರಮನೆ ಆವರಣದಲ್ಲಿ ಘಟನೆ ನಡೆದಿದ್ದು ಮಾವುತನ್ನ ಹೊತ್ತುಕೊಂಡಿದ್ದ ಧನಂಜಯ್ ಕಂಜನ್ನನ್ನು ಬೆರಸುತ್ತಾ ಓಡಿದೆ. ಈ ವೇಳೆ ಮಾವುತ ಆನೆಯನ್ನ ಆದಷ್ಟು ಕಂಟ್ರೋಲ್ ಮಾಡಲು ಪ್ರಯತ್ನಿಸಿ ಕೊನೆಗೆ ಅದರಲ್ಲಿ ಯಶಸ್ವಿಯು ಆಗಿದ್ದಾನೆ. ಆ ಬಳಿಕ ಇನ್ನೊಂದಿಷ್ಟು ಮಾವುತರು ಓಡಿ ಬಂದು ಕಂಜನ್ ಆನೆಯನ್ನ ನಿಯಂತ್ರಣಕ್ಕೆ ತೆಗೆದುಕೊಂಡರು. ಅರಮನೆಯ ಬ್ಯಾರಿಕೇಡ್ ಗೇಟ್‌ಗಳನ್ನ ತಳ್ಳಿಕೊಂಡು ರಸ್ತೆಗಿಳಿದ ಕಂಜನ್ ಅಲ್ಲಿ ಓಡಾಡುತ್ತಿದ್ದ ವಾಹನ ಸವಾರರಿಗೆ ಭಯ ಹುಟ್ಟಿಸಿದನಾದರೂ ಯಾರಿಗೂ ತೊಂದರೆ ಕೊಡಲಿಲ್ಲ.
ಇನ್ನೂ ಈ ಬಗ್ಗೆ ಅರಣ್ಯ ಇಲಾಖೆಯ ಡಿಸಿಎಫ್ ಪ್ರಭುಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ದಸರಾಕ್ಕೆ ಬಂದಿರುವ ಗಂಡಾನೆಗಳಿಗೆ ಊಟ ನೀಡುವ ಹೊತ್ತಿನಲ್ಲಿ ಹೆಣ್ಣಾನೆಗಳು ಜೊತೆಗೆ ಇರುತ್ತಿದ್ದವು. ಆದರೆ ನಿನ್ನೆ ಕಂಜನ್ ಹಾಗೂ ಧನಂಜಯ್ ಆನೇ ಒಟ್ಟಿಗಿದ್ದವು. ಹೀಗಾಗಿ ಧನಂಜಯ್ ಕೆರಳಿ ಕಂಜನ್‌ನನ್ನ ಹೆದರಿಸಿ ಬೆದರಿಸಿದ್ದಾನೆ ಎಂದಿದ್ದಾರೆ.
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ