SHIVAMOGGA | MALENADUTODAY NEWS | ಮಲೆನಾಡು ಟುಡೆ Jan 6, 2025
ಮಲೆನಾಡಿನ ದೀಪವೊಂದು ಆರಿದೆ. ಮುಳುಗಡೆ ಸಂಕಟವನ್ನು ತನ್ನೊಡಲ ಕವಿತೆಯಾಗಿಸಿದ ಹಿರಿಯ ಸಾಹಿತಿ ನಾ. ಡಿಸೋಜಾ ನಿನ್ನೆ ನಿಧನರಾಗಿದ್ದಾರೆ. 87 ವರ್ಷದ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಭಾನುವಾರ ರಾತ್ರಿ 7.50ಕ್ಕೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ ಫಿಲೋಮಿನಾ, ಪುತ್ರಿ ಶೋಭಾ, ಪುತ್ರರಾದ ನವೀನ್ ಹಾಗೂ ಸಂತೋಷ್ ಇದ್ದಾರೆ.
ಯಾವಾಗ ಅಂತ್ಯಕ್ರಿಯೆ
ಮೃತರ ಪಾರ್ಥಿವ ಶರೀರವನ್ನು ಇವತ್ತು ಸೋಮವಾರ ಮಧ್ಯಾಹ್ನದ ನಂತರ ಸಾಗರದ ನೆಹರೂ ನಗರದ 2ನೇ ಕ್ರಾಸ್‌ನಲ್ಲಿರುವ ಸ್ವಗೃಹದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಬಳಿಕ ಮಂಗಳವಾರ ಸಂಜೆ 4ಕ್ಕೆ ಸಾಗರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ನಾ ಡಿಸೋಜಾರ ಪುತ್ರ ನವೀನ್ ಡಿಸೋಜಾ ತಿಳಿಸಿದ್ದಾರೆ.
ನಾ ಡಿಸೋಜಾ ವ್ಯಕ್ತಿಯಲ್ಲ ಕಥೆ
ಸಾಗರ ಅನ್ನುವ ಊರಿನಲ್ಲಿ ಜೋರು ಮಳೆಯ ನಡುವೆ ಎಲ್ಲಾ ಕ್ಲೀಶೆಗಳಿಂದ ಆಚೆಗೆ ಎಲ್ಲಿರಿಗೂ ಸಿಗುವ ಮನೆಯೆಂದರೆ ನಾ ಡಿಸೋಜಾರವರ ಮನೆ. ಸಾಗರಕ್ಕೆ ಭೇಟಿಕೊಟ್ಟವರೆಲ್ಲರಿಗೂ ಇವರ ಮನೆ ಬಾಗಿಲು ಸದಾ ತೆರೆದಿರುತ್ತದೆ. ಜ್ಞಾನದ ಬತ್ತಳಿಕೆ ಬೇಕಾದಷ್ಟು ಸಂಪತ್ತು ಸಿಗುತ್ತಿದ್ದ ಅವರ ಮನೆಯಲ್ಲಿಗ ನೀರವ ಮೌನ ಆವರಿಸಿದೆ.
ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನ ಕಣ್ಣಾರೆ ನೋಡಿದ್ದ ನಾ ಡಿಸೋಜಾ ಅದರ ಸಂಕಷ್ಟವನ್ನೆ ತಮ್ಮ ಕಥೆಗಳನ್ನಾಗಿಸಿದರು.
ಮಲೆನಾಡಿನ ಜನರ ಬೇಗುದಿಯನ್ನು ಮುಂದಿಟ್ಟು, ಹೇಳಬೇಕಾದನ್ನ ಹೇಳಿ, ಸಾಮಾನ್ಯರಂತೆಯೇ ಬದುಕಿದವರು ನಾ ಡಿಸೋಜಾ
ಇವರ ಪೂರ್ಣ ಹೆಸರು ನಾರ್ಬರ್ಟ್ ಡಿಸೋಜಾ, ಇವರ ಕುಟುಂಬಸ್ಥರು ಮೂಲತಃ ಉತ್ತರ ಕನ್ನಡ ಜಿಲ್ಲೆ ಮುರುಡೇಶ್ವರದವರು. ಶಿಕ್ಷಕರಾಗಿ ಸಾಗರಕ್ಕೆ ಇವರ ತಂದೆ ಬಂದರು. ತಂದೆ ಫಿಲಿಪ್ ಡಿಸೋಜಾ ಹಾಗೂ ರೂಪಿನಾ ಬಾಯಿ ದಂಪತಿ ಪುತ್ರರಾಗಿ 1937ರ ಜೂನ್ 6ರಂದು ನಾ ಡಿಸೋಜಾ ಜನಿಸಿದರು.
ವಿದ್ಯಾಭ್ಯಾಸ ಮುಗಿಸಿದ ನಾ ಡಿಸೋಜಾರವರು ಲೋಕೋಪಯೋಗಿ ಇಲಾಖೆಯಲ್ಲಿ ಟೈಪಿಸ್ಟ್, ದ್ವಿತೀಯ ದರ್ಜೆ ಹಾಗೂ ಪ್ರಥಮ ದರ್ಜೆ ಕ್ಲರ್ಕ್ ಆಗಿ ಕೆಲಸ ಮಾಡಿದ್ದಾರೆ. ಈ ವೇಳೆ ಕಾರ್ಗಲ್‌ನ ಶರಾವತಿ ಯೋಜನೆ, ಮಾಸ್ತಿಕಟ್ಟೆ, ತೀರ್ಥಹಳ್ಳಿ, ಸಾಗರದಲ್ಲಿ ಕೆಲಸದ ಮಾಡಿದ ಅನುಭವ ಇವರದ್ದು.
ತಾಯಿಯ ಕಥೆ ಶಿಕ್ಷಕರ ಪಾಠ
ತಮ್ಮ ತಾಯಿ ಹೇಳುತ್ತಿದ್ದ ಕಥೆ, ಜನಪದವನ್ನ ಆಸಕ್ತಿಯಿಂದ ಕೇಳುತ್ತಿದ್ದ ನಾ ಡಿಸೋಜಾ ಅವುಗಳನ್ನ ಸಾಹಿತ್ಯವಾಗಿಸುವ ಪ್ರಯತ್ನ ಆರಂಭಿಸಿದರು. ಬರಹದಲ್ಲಿ ತಮ್ಮನ್ನ ತೊಡಿಸಿಕೊಳ್ಳುವ ಅವರ ಆಸಕ್ತಿಗೆ ಶಕ್ಷಕರಾಗಿದ್ದ ಜಿಎಎಸ್ ಶಿವರುದ್ರಪ್ಪರವರ ಸಲಹೆಗಳು ನೀರೆರೆದಿತ್ತು. ಹಿರಿಯ ಸಾಹಿತಿಗಳ ಜ್ಞಾನ ಬಂಡಾರವನ್ನು ತುಂಬಿಕೊಂಡ ನಾ ಡಿಸೋಜಾ, ಜನಸಾಮಾನ್ಯರ ಸಂಕಷ್ಟದ ಭಾಷೆಗಳನ್ನು ಅರ್ಥ ಮಾಡಿಕೊಂಡರು. ಹಾಗಾಗಿಯೇ ಜನರ ಭಾಷೆಯನ್ನೆ ಸಾಹಿತ್ಯದ ವಾಕ್ಯವಾಗಿಸುತ್ತಾ, ತಮ್ಮ ಬರಹವನ್ನು ಹೃದಯಸ್ಪರ್ಶಿಯಾಗಿಸಿದರು.
75 ಕಾದಂಬರಿಗಳು, 6 ಚಾರಿತ್ರಿಕ ಕಾದಂಬರಿ, 25 ಮಕ್ಕಳ ಕಾದಂಬರಿ, 9 ಕಥಾ ಸಂಕಲನ, ಸಮಗ್ರ ಕಥೆಗಳ ಎರಡು ಸಂಪುಟಗಳು, 500 ಕ್ಕೂ ಹೆಚ್ಚು ಕಥೆಗಳು, ನಾಟಕ, ರೇಡಿಯೋ ನಾಟಕಗಳನ್ನು ರಚಿಸಿದ ನಾ ಡಿಸೋಜಾರವರ ಮುಳುಗಡೆಯ ಊರಿಗೆ ಬಂದವರು ಎಂಬ ಮಕ್ಕಳ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ಲಭ್ಯವಾಗಿತ್ತು. ದ್ವೀಪ ಮತ್ತು ಕಾಡಿನ ಬೆಂಕಿ ಸಿನಿಮಾಗಳಾದವು, ರಾಷ್ಟ್ರೀಯ ಪ್ರಶಸ್ತಿ ಪಡೆದವರು. 2014ರಲ್ಲಿ ಮಡಿಕೇರಿಯಲ್ಲಿ ನಡೆದ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು.
ಲಿಂಗನಮಕ್ಕಿ ಅಣೆಕಟ್ಟೆ ಮತ್ತು ಬದುಕು
ನಾ ಡಿಸೋಜ ರಾರವರ ಸಾಹಿತ್ಯದ ವಿಶಾಲತೆಯು ಶರಾವತಿ ಹಿನ್ನೀರಿನಷ್ಟೆ ವ್ಯಾಪ್ತಿಯನ್ನ ಹೊಂದಿದೆ. ಇಲ್ಲಿನ ನದಿದಡದ ಬದುಕನ್ನ ಕಟ್ಟಿಕೊಟ್ಟ ನಾ ಡಿಸೋಜಾ ಅದರದ್ದೆ ಆದ ಹೋರಾಟಗಳಲ್ಲಿ ಪಾಲ್ಗೊಂಡು ಸರ್ಕಾರವನ್ನು ನೇರವಾಗಿ ಟೀಕಿಸಿದರು. ಅಣೆಕಟ್ಟು ಜೀವನ ಬದಲಿಸುತ್ತೆ ಎಂದುಕೊಂಡಿದ್ದ ನಾ ಡಿಸೋಜಾರವರಿಗೆ, ಡ್ಯಾಂ ನಿರ್ಮಾಣವಾದ ಪರಿಣಾಮವಾಗಿ ಜನ ಎದುರಿಸಿದ ಸಂಕಷ್ಟಗಳನ್ನು ನೋಡಿ ಸುಮ್ಮನೆ ಕೂರಲಾಗಲಿಲ್ಲ. ಅವುಗಗಳಲ್ಲಿ ದ್ವೀಪದ ಸಣ್ಣಕಥೆಗಳನ್ನಾಗಿಸಿ ಕನ್ನಡಿಗರೆ ಮುಂದಿಟ್ಟರು.
ಒಟ್ಟಾರೆ, ಜಗತ್ತನ್ನು ಸಾಗರದ ದ್ವೀಪದಿಂದ ಸಣ್ಣಕಥೆಯಾಗಿ ನೋಡಿದ ನಾ ಡಿಸೋಜಾ ಇವತ್ತು ನಮ್ಮನ್ನ ಅಗಲಿದ್ದಾರೆ, ಮುಳುಗಡೆ ಊರಿನಿಂದ ಹೊರಬಂದ ಅವರ ಬರಹದ ಜೊತೆ ಅವರ ನೆನಪುಗಳು ಎಂದಿಗೂ ಶಾಶ್ವತ.
SUMMARY | Well-known writer Na D Souza passes away
KEY WORDS | Well-known writer Na D Souza passes away