SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 27, 2025
ಶಿವಮೊಗ್ಗದ 5 ನೇ ಹೆಚ್ಚುವರಿ ನ್ಯಾಯಾಲಯವು ಈ ಹಿಂದೆ ಮಹಿಳೆಯಬ್ಬರ ಕತ್ತು ಕೊಯ್ದು ಬಂಗಾರ ದೋಚಿದ್ದ ಮೂವರು ಆರೋಪಿಗಳಿಗೆ ಜೀವತಾವಧಿ ಶಿಕ್ಷೆ ಹಾಗೂ ತಲಾ 10 ಸಾವಿರ ದಂಡವನ್ನು ವಿಧಿಸಿದೆ.
ಏನಿದು ಪ್ರಕರಣ
ಈ ಹಿಂದೆ 2020 ರಲ್ಲಿ ಮೂವರ ದುಷ್ಕರ್ಮಿಗಳು ಸಾಗರ ತಾಲೂಕಿನ ಸಿರಿವಂತೆ ಗ್ರಾಮದ ಮಹಿಳೆಯೊಬ್ಬರ ಕತ್ತನ್ನು ಕೊಯ್ದು ಕೊಲೆ ಮಾಡಿ ಆಕೆಯ ಬಳಿ ಇದ್ದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದರು. ಈ ಹಿನ್ನಲೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.. ನಂತರ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ದೋಷಾರೋಪಣ ವರದಿ ಸಲ್ಲಿಸಿದ್ದರು. ನಂತರ ನ್ಯಾಯಾಲಯದಲ್ಲಿ ಆರೋಪಿಗಳ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಪ್ರಭಾವತಿ ಅವರು, ಸಾಗರ ನಗರದ ನಿವಾಸಿಗಳಾದ ಅರುಣ್ ಅಲಿಯಾಸ್ ಗೆಂಡೆ ಅರುಣ್(27), ಅಭಿಜಿತ್ (28) ಹಾಗೂ ಇರ್ಫಾನ್(20) ಎಂಬವರಿಗೆ ದಂಡ ಸಹಿತ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
SUMMARY | The 5th Additional Court in Shivamogga has sentenced three persons to life imprisonment and imposed a fine of Rs 10,000 each on them for slitting the throat of a woman and robbing her of gold.
KEYWORDS | Shivamogga, Court, crime,