SHIVAMOGGA | MALENADUTODAY NEWS | ಮಲೆನಾಡು ಟುಡೆ Oct 20, 2024
ಶಿವಮೊಗ್ಗ | ಮಳೆಯ ಅಬ್ಬರಕ್ಕೆ ಶಿವಮೊಗ್ಗದಲ್ಲಿ ಹಲೆವೆಡೆ ಮನೆಗಳಿಗೆ ನೀರು ನುಗ್ಗಿದೆ. ಈ ಬಗ್ಗೆ ಗಮನಿಸುವುದಾದರೆ, ಅದರ ವಿವರ ಹೀಗಿದೆ.
ಶಿವಮೊಗ್ಗದ LBS ನಗರ ಕೃಷ್ಣಮಠ ರಸ್ತೆ ಮತ್ತು ಅಶ್ವತ್ ನಗರದ ರೋಟರಿ ಭವನದ ಹಿಂಭಾಗ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.


ಎಣಿಕೆಗಿಂತಲೂ ಹೆಚ್ಚು ಮಳೆಯಾದ್ದರಿಂದ ಎಲ್ಲಾ ಕಡೆಯಿಂದಲೂ ನೀರು ಬ್ಲಾಕ್ ಮನೆಯೊಳಗೆ ನುಗ್ಗಿದೆ. ರಸ್ತೆತುಂಬೆಲ್ಲಾ ನೀರುಹರಿಯುತ್ತಿದ್ದ ದೃಶ್ಯ ನೋಡಿ ಜನರು ಗಾಬರಿ ಬಿದ್ದಿದ್ದರು.
ಇತ್ತ ಕನಕನಗರದ ಮೇನ್ ರೋಡ್‌ನಲ್ಲಿ ಮೊಣಕಾಲಿನವರೆಗೂ ರಸ್ತೆ ಮೇಲೆ ನೀರು ಹರಿದಿದೆ. ಮಳೆಯ ಅಬ್ಬರಕ್ಕೆ ಜನರು ಹೊರಬರಲಾರದೇ ಪರದಾಡುತ್ತಿದ್ದರೇ ಇಲ್ಲಿನ ತಗ್ಗುಪ್ರದೇಶಗಳಲ್ಲಿ ಕೆಲವು ಮನೆಯೊಳಗೆ ನೀರು ನುಗ್ಗಿದೆ.
ಮತ್ತೆ ಕೆಲವು ಮನೆಯೊಳಗೆ ರಾತ್ರಿಯೇ ನೀರು ನುಗ್ಗಿದ್ದರಿಂದ ಇಡೀ ರಾತ್ರಿ ಮಳೆಯ ನಡುವೆ ಜಾಗರಣೆ ಮಾಡಬೇಕಾದ ಸನ್ನಿವೇಶ ನಿರ್ಮಾಣವಾಗಿತ್ತು. ಮಳೆಯೊಳಗೆ ಕಾಲು ಮುಳುಗವಷ್ಟು ನೀರು ತುಂಬಿತ್ತಷ್ಟೆ ಅಲ್ಲದೇ ಗಲೀಜು ನೀರು ಸ್ವಚ್ಚಗೊಳಿಸುವುದು ಹೇಗೆ ಎಂಬ ಆತಂಕವನ್ನ ಮೂಡಿಸಿತ್ತು.
ಶಿವಮೊಗ್ಗ ಮಳೆಯ ಅವಾಂತರಕ್ಕೆ ಮನೆಯೊಳಗೆ ಗಲೀಜು ನೀರಿನ ಪ್ರವಾಹ pic.twitter.com/nmLBQPB6H5
— malenadutoday.com (@malnadtoday) October 20, 2024