SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 9, 2024 | SHIVAMOGGA DASARA | ಶಿವಮೊಗ್ಗ ದಸರಾದಲ್ಲಿ ಇವತ್ತು ಸಹ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ ಅದರ ವಿವರಗಳನ್ನ ಗಮನಿಸುವುದಾದರೆ, ಶಿವಮೊಗ್ಗದ ಕುವೆಂಪುರ ರಂಗಮಂದಿರದಲ್ಲಿ ಬೆಳಗ್ಗೆ 10 ರಿಂದ ಸಂಜೆ 4ರ ವರೆಗೆ ಜ್ಞಾನ ದಸರಾ ಅಂಗವಾಗಿ ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಕೆಗೆ ಒಂದು ದಿನದ ತರಬೇತಿ ನೀಡಲಾಗುತ್ತಿದೆ.
ಇತ್ತ ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ಬೆಳಗ್ಗೆ 10:30ಕ್ಕೆ ಆಹಾರ ದಸರಾ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಎರಡು ನಿಮಿಷದಲ್ಲಿ ಮಲ್ಲಿಗೆ ಇಡ್ಲಿ, ಸಾಂಬಾರ್ ಹಾಗೂ ಬಾಳೆ ಹಣ್ಣು ತಿನ್ನುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಸಂಜೆ 4.15 ರಿಂದ ರಂಗ ದಸರಾ ಅಂಗವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಆಯ್ದ 50 ಮನೆಗಳಲ್ಲಿ ಲಘು ಪ್ರಹಸನದ ಅಡಿಯಲ್ಲಿ ಕುಟುಂಬರಂಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಸಂಜೆ 6 ರಿಂದ 10ರ ವರೆಗೆ ಕಲಾ ದಸರಾದ ಅಂಗವಾಗಿ ಭಜನಾಮೃತ ವೈಭವವೂ ಶಿವಪ್ಪ ನಾಯಕ ಅರಮನೆಯಲ್ಲಿ ನಡೆಯಲಿದೆ.

ಅಂತಿಮವಾಗಿ ಸಂಜೆ 5 ರಿಂದ 10ರ ವರೆಗೆ ಫ್ರೀಡಂ ಪಾರ್ಕ್ನಲ್ಲಿ ಮ್ಯೂಸಿಕಲ್ ನೈಟ್ ನಡೆಯಲಿದೆ.
SUMMARY | Details of programmes to be held in Shivamogga on Wednesday on the occasion of Nadahabba Dasara
KEYWORDS | Nadahabba Dasara , Shivamogga dasara