SHIVAMOGGA | MALENADUTODAY NEWS | ಮಲೆನಾಡು ಟುಡೆ Nov 12, 2024
ಚಿಕ್ಕಮಗಳೂರು | ಕರಾವಳಿಯ ಈದು ಬಳಿ ಕಾಣಿಸಿಕೊಂಡಿದ್ದರು ಎನ್ನಲಾದ ಶಂಕಿತ ನಕ್ಸಲರು ಇದೀಗ ಶೃಂಗೇರಿ ಭಾಗದಲ್ಲಿ ಓಡಾಡಿರುವ ಬಗ್ಗೆ ಅನುಮಾನ ಮೂಡಿದೆ.
ಕಳೆದ ಕೆಲವು ದಿನಗಳ ಹಿಂದೆ ಕಾರ್ಕಳ ಭಾಗದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದರು. ಈ ಬಗ್ಗೆ ಅಲ್ಲಿನ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಅಲ್ಲದೆ ಕೆಲವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಇದೀಗ ಶೃಂಗೇರಿ ತಾಲೂಕು ನೆಮ್ಮಾರ್ ಸಮೀಪದ ಬುಕಡಿಬೈಲಿನಲ್ಲಿ ಇಬ್ಬರು ನಕ್ಸಲ್ ಅನುಕಂಪಿತ ವ್ಯಕ್ತಿಗಳನ್ನು ಪೊಲೀಸ್ ಠಾಣೆಗೆ ಕರೆತಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ನೇತೃತ್ವದಲ್ಲಿ ಕೆಲವು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ.
ಅರಣ್ಯ ಒತ್ತುವರಿ ಮತ್ತು ಕಸ್ತೂರಿ ರಂಗನ್ ವರದಿ ಸಂಬಂಧ ಕೊಪ್ಪ ತಾಲೂಕಿನ ಯಡಗುಂದಿ ಗ್ರಾಮಕ್ಕೆ ನಕ್ಸಲರು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ನಿಟ್ಟಿನಲ್ಲಿ ಗ್ರಾಮಸ್ಥರಿಂದ ಎಎನ್ಎಫ್ ಮತ್ತು ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ ಎನ್ನಲಾಗಿದ್ದು, ಕೆರೆಕಟ್ಟೆ, ಕುದುರೆಮುಖ, ತನಿಕೋಡು ಚೆಕ್ಪೋಸ್ಟ್ ಭಾಗದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗಿದೆಯಂತೆ.
SUMMARY | Sringeri, Nemmar, Edu, Udupi, Chikkamagaluru, Kudremukh, Kerekatte, Kudremukh, Thanikodu check post, ANF, Chikkamagaluru SP, Shimavogga, Naxal, Naxal sympathizer, suspected to be involved in the movement of Naxals.
KEYWORDS | naxal,naxal leaders,#malnad,naxal activities,malnad region,naxal in kerala,naxals,naxal leaders in karnataka,naxal arrested,naxal leader b g krishnamurthy,nia arrests naxal in kerala,naxal activities in karnataka,naxal force,#naxals,malnad,malnad rains,#naxal,3naxals,karnataka naxal,chikkamagaluru naxal,naxal attack,in the name of naxal,naxal prabha,three naxals,naxal movement,naxals in karnataka,naxal attack dantewada