SHIVAMOGGA | MALENADUTODAY NEWS | ಮಲೆನಾಡು ಟುಡೆ Jan 6, 2025
ಡಿಕ್ಕಿ ಹೊಡೆದು ಅಪಘಾತ : ಅಪರಿಚಿತ ವ್ಯಕ್ತಿ ಸಾವು
ಜನವರಿ 04 ರಂದು ಬೆಳಗಿನ ಜಾವ ಸುಮಾರು 3 ರಿಂದ 6 ಗಂಟೆಯ ಅವಧಿಯಲ್ಲಿ ಪೆಸಿಟ್ ಕಾಲೇಜು ಸಾನ್ವಿ ಹೋಟೆಲ್ ಸಮೀಪ ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಅವರು ಸಾವನ್ನಪ್ಪಿದ್ದಾರೆ. ಸಾಗರದಿಂದ ಶಿವಮೊಗ್ಗ ಕಡೆಗೆ ಬರುತ್ತಿದ್ದ ಯಾವುದೋ ವಾಹನ ಚಾಲಕ ಅತಿ ವೇಗದಿಂದ ವಾಹನ ಚಲಾಯಿಸಿಕೊಂಡು ಬಂದು ಅಪರಿಚಿತನಿಗೆ ಡಿಕ್ಕಿ ಹೊಡೆದಿದ್ದಾನೆ.
ಇದೀಗ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿರದ ಹಿನ್ನೆಲೆಯಲ್ಲಿ ಆತನ ಸುಳಿವಿಗಾಗಿ ಪೊಲೀಸ್ ಇಲಾಖೆ ಪ್ರಕಟಣೆ ನೀಢಿದೆ. ಮೃತ ವ್ಯಕ್ತಿಯು ಅಂದಾಜು 5.3 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ, ಕೋಲು ಮುಖ ಹೊಂದಿದ್ದು, ಕಂದು ಬಣ್ಣದ ತುಂಬು ತೋಳಿನ ಜರ್ಕಿನ್, ನೀಲಿ ಬಣ್ಣದ ಟೀ ಶರ್ಟ್, ಬಿಳಿ ಬಣ್ಣದ ಬನಿಯನ್, ನಶ್ಯ ಕಲರ್ ಪ್ಯಾಂಟ್ ಧರಿಸಿರುತ್ತಾನೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ತುಂಗಾನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮನೆಗೆ ಮರಳುತ್ತಿದ್ದ ಮಹಿಳೆಯ ಕುತ್ತಿಗೆ ಕೈ ಹಾಕಿ ಸರ ಕದ್ದು ಪರಾರಿಯಾದ ಘಟನೆ ಸೊರಬ ಪೇಟೆಯಲ್ಲಿ ನಡೆದಿದೆ. ಶನಿವಾರ ರಾತ್ರಿ ನಡೆದ ಘಟನೆ ಬಗ್ಗೆ ನಿನ್ನೆ ವರದಿಯಾಗಿದೆ. ಕಾನುಕೇರಿ ಬಡಾವಣೆ ನಿವಾಸಿ ಲಕ್ಷ್ಮೀ ಬಾಯಿ ಎಂಬುವವರ ಮಾಂಗಲ್ಯ ಅಪಹರಿಸಲಾಗಿದೆ. ಸರ ಸುಮಾರು 25 ಗ್ರಾಂ ತೂಕವಿದೆ. ಬೈಕ್ನಲ್ಲಿ ಬಂದವರು ಸರ ಕಿತ್ತುಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಕೇಸ್ ಸಹ ದಾಖಲಾಗಿದೆ.
SUMMARY | Soraba Police Station, chain snatching, unknown person hit by car
KEY WORDS | Soraba Police Station, chain snatching, unknown person hit by car