SHIVAMOGGA | MALENADUTODAY NEWS | ಮಲೆನಾಡು ಟುಡೆ Oct 31, 2024
ಶಿವಮೊಗ್ಗದಲ್ಲಿ ಎರಡು ಮೂರು ದಿನ ರೆಸ್ಟ್ ಕೊಟ್ಟಿದ್ದ ಮಳೆರಾಯ ನಿನ್ನೆ ಸಂಜೆ ಮತ್ತೆ ಅಬ್ಬರಿಸಿದ್ದಾನೆ. ಅದರಲ್ಲಿಯು ಸಿಟಿಯಲ್ಲಿಯೇ ಒಂದು ಗಂಟೆಗೂ ಅಧಿಕ ಹೊತ್ತು ವರ್ಷಧಾರೆಯಾಗಿದೆ. ಇನ್ನು ಇವತ್ತು ಬೆಳಗ್ಗೆಯಿಂದಲೂ ಮೋಡ ಮುಸುಕಿದೆ.
ಈ ನಡುವೆ ರಾಜ್ಯ ಹವಾಮಾನ ಇಲಾಖೆ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಇವತ್ತು ಯೆಲ್ಲೊ ಅಲರ್ಟ್ ನೀಡಿದೆ. ಎರಡು ಜಿಲ್ಲೆಗಳ ಆಯ್ದ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.
ಕರಾವಳಿಯ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಸ್ಥಳಗಳಲ್ಲಿ ಮಳೆಯಾಗುವ ಸೂಚನೆ ನೀಡಲಾಗಿದೆ.
ಇನೂ ಮಂಡ್ಯ, ಕರಾವಳಿ ಹಾಗೂ ಒಳನಾಡಿನ ಕೆಲವೆಡೆ ನವೆಂಬರ್ 3ರ ವರೆಗೂ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆಎ.

SUMMARY | state meteorological department has issued a yellow alert for Shivamogga and Chikkamagaluru districts today. Heavy rain accompanied by thundershowers has been predicted in selected areas of the two districts
KEYWORDS | state meteorological department has issued a yellow alert , Shivamogga,Chikkamagaluru district,Heavy rain ,thundershowers,