SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 25, 2024
ಬಾಲಕಿ ಕೊಲೆ ಅಪ್ಪನೇ ಆರೋಪಿ
ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದಲ್ಲಿ ಸೆಪ್ಟೆಂಬರ್ 19 ರಂದು ನಡೆದಿದ್ದ ಬಾಲಕಿ ಕೊಲೆ ಪ್ರಕರಣದಲ್ಲಿ ತಂದೆಯನ್ನೆ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಪ್ರಕರಣದ ವಿಚಾರಣೆ ವೇಳೆ ಪೊಲೀಸರ ಬಳಿ ಆರೋಪಿ ಸತ್ಯ ಬಾಯ್ಬಿಟ್ಟಿದ್ದಾನೆ. ತನ್ನ ಪತ್ನಿ ಮೇಲೆ ಅನುಮಾನ ಇತ್ತು, ಮಗಳು ವೇದ ನನಗೆ ಹುಟ್ಟಿಲ್ಲ ಎಂದು ಸಂಶಯಿಸಿದ್ದೆ. ಇದೇ ಕಾರಣಕ್ಕೆ ಜಗಳವಾಗುತ್ತಿತ್ತು. ಘಟನೆ ನಡೆದ ದಿನ ಮನೆಗೆ ಬಂದಾಗ ಮಗಳು ಇಲ್ಲಸಲ್ಲದ ಮಾತನಾಡಿದಳು ಅದಕ್ಕೆ ಕಬ್ಬಿಣದ ಸಲಾಕೆಯಿಂದ ತಲೆಗೆ ಹೊಡೆದೆ. ಆಕೆ ಸಾವನ್ನಪ್ಪಿದಳು ಎಂದು ಆರೋಪಿ ಪೊಲೀಸರ ಬಳಿ ಬಾಯ್ಬಿಟ್ಟಿದ್ಧಾನೆ.
ಜಯಪುರದಲ್ಲಿ ಕುಂಸಿ ವ್ಯಕ್ತಿ ಅರೆಸ್ಟ್
ಚಿಕ್ಕಮಗಳೂರಿನ ಜಯಪುರದಲ್ಲಿ ಕೆಲಸಕ್ಕಿದ್ದ ಮನೆಯಲ್ಲಿ ಚಿನ್ನ ಕದ್ದ ಆರೋಪದ ಮೇರೆಗೆ ಕುಂಸಿಯ ವ್ಯಕ್ತಿಯೊಬ್ಬನನ್ನ ಪೊಲೀಸರು ಬಂಧಿಸಿದ್ದಾರೆ. ಕೆಲಸಕ್ಕಿದ್ದವರ ಮನೆಯ ಬೀರುವಿನಲ್ಲಿದ್ದ ಚಿನ್ನದ ಬ್ರೇಸ್‌ಲೇಟ್ ಕಳವು ಮಾಡಿದ್ದರ ಬಗ್ಗೆ ಆ ಮನೆಯವರು ದೂರು ಕೊಟ್ಟಿದ್ದರು. ತನಿಖೆ ಆರಂಭಿಸಿದ ಪೊಲೀಸರು ಮನೆಯಲ್ಲಿದ್ದ ಕುಂಸಿ ಮೂಲದ ವ್ಯಕ್ತಿಯನ್ನ ವಿಚಾರಿಸಿದ್ದಾರೆ. ಆತ 8 ಗ್ರಾಂ ತೂಕದ ಆಭರಣ ಕಳವು ಮಾಡಿರುವ ವಿಚಾರ ಬಾಯ್ಬಿಟ್ಟಿದ್ದ . ಇದೀಗ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
ಲಾರಿಯಿಂದ ಗ್ರಾನೈಟ್ಸ್ ಅನ್‌ಲೋಡ್ ಮಾಡುವ ಶಾಕ್
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಬೆಟ್ಟಮಕ್ಕಿಯಲ್ಲಿ ಲಾರಿಯಿಂದ ಗ್ರಾನೈಟ್ ಅನ್‌ಲೋಡ್ ಮಾಡುವಾಗ ಅವಘಡ ಸಂಭವಿಸಿದೆ. ಅನ್‌ಲೋಡ್ ಮಾಡುತ್ತಿದ್ದ ರಾಜೇಶ್ ಎಂಬವರ ಮೇಲೆ ಜೋಡಿಸಿದ್ದ ಗ್ರಾನೈಟ್ ಕಲ್ಲುಗಳು ಉರುಳಿವೆ. ಪರಿಣಾಮ ರಾಜೇಶ್‌ರವರ ಎರಡು ಕಾಲುಗಳು ಸಂಪೂರ್ಣ ಜಖಂಗೊಂಡಿದೆ. ಇವರಿಗೆ ಶಿವಮೊಗ್ಗದ ಮೆಗ್ಗಾನ್ ಆ ಬಳಿಕ ಮಂಗಳೂರಿನ ವೆನ್‌ಲಾಕ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಷ್ಟಾದರೂ ಈತನ ಚಿಕಿತ್ಸೆ ಬಗ್ಗೆ ಗ್ರಾನೈಟ್ ಲೋಡ್ ಇಳಿಸಿಕೊಂಡ ಮನೆಯವರಾಗಲಿ, ಲಾರಿಯವರಾಗಲಿ ನೆರವು ನೀಡಿಲ್ಲ ಎಂದು ದೂರಲಾಗಿದೆ.