SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 4, 2024 | ಭಾವಸಾರ ಕ್ಷತ್ರಿಯ ಮಹಾಜನ ಸಮಾಜದ ಮಾಜಿ ಅಧ್ಯಕ್ಷರು,ಶ್ರೀ ರಾಮಸೇವಾ ಭಾವಸಾರ ಕ್ಷತ್ರಿಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಾಜಿ ಉಪಾಧ್ಯಕ್ಷರು ಜಿ. ಎಸ್ ಶಿವಾಜಿ ರಾವ್ ರವರು ನಿನ್ನೆ ರಾತ್ರಿ 11.00 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ.
ಇವರು ಶ್ರೀ ಮೈಲಾರೇಶ್ವರ ದೇವಸ್ಥಾನ,ನವಲೆ ವೆಂಕಟರಮಣ ದೇವಸ್ಥಾನ, ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಹೀಗೆ ಹಲವಾರು ದೇವಸ್ಥಾನಗಳ ಅಭಿವೃದ್ದಿ ಸಮಿತಿಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಮಾಜ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿದ್ದರು ಶತಮಾನದ ಇತಿಹಾಸವುಳ್ಳ ದುರ್ಗಿಗುಡಿಯ ದಿ ಮೈಸೂರು ಸೂಯಿಂಗ್ ಮಷೀನ್ ಸಪ್ಲೈರ್ಸ್ ಕೋ ನ ಮಾಲೀಕರಾದ ಇವರು ಪತ್ನಿ, ಇಬ್ಬರು ಪುತ್ರ, ಇಬ್ಬರು ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಭಾವಸಾರ ಸಮಾಜದ ಅಧ್ಯಕ್ಷರಾದ ಗಜೇಂದ್ರನಾಥ್ ಮಾಳೋದೆ ಯವರು ಹಾಗೂ ಭಾವಸಾರ ಸೊಸೈಟಿಯ ಅಧ್ಯಕ್ಷರಾದ ಸಂತೋಷ್ ಸಾಕ್ರೆ ಮತ್ತು ಉಪಾಧ್ಯಕ್ಷರಾದ ವಿನಯ್ ವಿ ತಾಂದಲೇ ಹಾಗೂ ಎಲ್ಲಾ ನಿರ್ದೇಶಕರು ಮೃತರಿಗೆ ಭಾವ ಪೂರ್ಣ ಶ್ರದ್ಧಾಂಜಲಿ ಯನ್ನು ಸಲ್ಲಿಸಿದ್ದಾರೆ.