SHIVAMOGGA | MALENADUTODAY NEWS | ಮಲೆನಾಡು ಟುಡೆ Oct 17, 2024
ಶಿವಮೊಗ್ಗ | ಜಿಲ್ಲೆಯ ಪ್ರಮುಖ ಜಲಾಶಯವಾಗಿರುವ ಭದ್ರಾ ಡ್ಯಾಮ್‌ಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದಿಂರ ಏಳು ಸಾವಿರ ಕ್ಯೂಸೆಕ್ಸ್‌ಗೂ ಅಧಿಕ ನೀರು ಹರಿದು ಬರುತ್ತಿದೆ. ಈಗಾಗಲೇ ಡ್ಯಾಮ್ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಅಷ್ಟೆ ಪ್ರಮಾಣದ ನೀರನ್ನ ಹೊರಕ್ಕೆಬಿಡಲಾಗುತ್ತಿದೆ. ಅದರ ಮಾಹಿತಿ ಇಲ್ಲಿದೆ.
ನಿನ್ನೆ ದಿನದ ಅಂಕಿ ಅಂಶಗಳ ಪ್ರಕಾರ, ಜಲಾಶಯಕ್ಕೆ 7,869 ಕ್ಯೂಸೆಕ್ ಒಳಹರಿವು ಇದೆ. ಅಷ್ಟೇ ಪ್ರಮಾಣದ ನೀರನ್ನು ಹೊರಗಡೆ ಬಿಡಲಾಗುತ್ತಿದೆ. ಈ ಪೈಕಿ ಭದ್ರಾ ಬಲದಂಡೆ ನಾಲೆಗೆ (RBC) 1,400 ಕ್ಯೂಸೆಕ್, ಎಡದಂಡೆ ನಾಲೆಗೆ (LBC) 180 ಕ್ಯೂಸೆಕ್, ಭದ್ರಾ ಮೇಲ್ದಂಡೆ ಯೋಜನೆಗೆ (UBP) 700 ಕ್ಯೂಸೆಕ್ ನೀರು ಮತ್ತು ನದಿಗೆ 2,000 ಕ್ಯೂಸೆಕ್ ಹರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ಡ್ಯಾಂನ ಜೊತೆಗೆ ತುಂಗಾ ಜಲಾಶಯದಿಂದಲೈ ಭರಪೂರ ನೀರು ಹರಿಯುತ್ತಿದ್ದು, ಅತ್ತ ತುಂಗಭದ್ರಾ ಡ್ಯಾಮ್ ಭರ್ತಿಯಾಗಿದೆ.
SUMMARY | More than 7,000 cusecs of water is flowing into bhadra dam due to heavy rains in the surrounding areas. The same amount of water is being released as the dam is already full. Here’s the information.
KEYWORDS | bhadra dam, heavy rain, water is released from bhadra.