SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 14, 2024 | ಶಿವಮೊಗ್ಗದಲ್ಲಿ ಮತ್ತೆ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಲಾಶಯಗಳು ಮತ್ತೆ ಭರ್ತಿ ಹಂತವನ್ನ ತಲುಪಿದೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯ ತುಂಗಾ, ಭದ್ರಾ , ಲಿಂಗನಮಕ್ಕಿ ಜಲಾಶಯಗಳು ಮುಂಗಾರು ಹಂಗಾಮಿನಲ್ಲಿ ಭರ್ತಿಯಾಗಿದ್ದವು.
ಇದೀಗ ಕಳೆದ ಐದಾರು ದಿನಗಳಿಂದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯ ತುಂಬಿದ್ದು ಚಾನಲ್‌ಗಳಿಗೆ ನೀರು ಹರಿಸಲಾಗುತ್ತಿದೆ.
ಕಳೆದ ಶುಕ್ರವಾರವೇ ಜಲಾಶಯ ಭರ್ತಿಯಾಗಿದ್ದು ಪ್ರತಿನಿತ್ಯ ಜಲಾಶಯಕ್ಕೆ ಐದು ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.
ಭದ್ರಾ ಡ್ಯಾಮ್‌ನಲ್ಲಿ ಇವತ್ತಿನ ಅಂಕಿ ಅಂಶದ ಪ್ರಕಾರ, 71.53 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಟ ಸಂಗ್ರಹ ಪ್ರಮಾಣ 71.54 ಟಿಎಂಸಿಯಾಗಿದೆ.
ಇನ್ನೂ ಜಲಾಶಯದಿಂದ 6208 ಕ್ಯೂಸೆಕ್ಸ್ ನೀರು ಹೊರಕ್ಕೆ ಹರಿಬಿಡಲಾಗುತ್ತಿದೆ. ಒಟ್ಟು 7423 ಕ್ಯೂಸೆಕ್ಸ್ ನೀರು ಒಳಹರಿವಿದೆ ಇತ್ತ ತುಂಗಾ ಜಲಾಶಯದಿಂದಲೂ ನೀರು ಹರಿಯುತ್ತಿರುವುದರಿಂದ ತುಂಗಭದ್ರಾ ಜಲಾಶಯಕ್ಕೂ ಭರಪೂರ ನೀರು ಹರಿಯುತ್ತಿದೆ.
ಉಳಿದ ಜಲಾಶಯಗಳ ವಿವರ ಹೀಗಿದೆ
SUMMARY | Bhadra reservoir in Shivamogga district is full due to the rains. The Tunga reservoir is also full and the Tungabhadra reservoir is flooded with water from tunga and bhadra rivers.
KEYWORDS | Bhadra reservoir in Shivamogga district is full, due to the rains, Tunga reservoir is also full, Tungabhadra reservoir, tunga and bhadra rivers.