SHIVAMOGGA | MALENADUTODAY NEWS | ಮಲೆನಾಡು ಟುಡೆ Oct 30, 2024
ಮೊನ್ನೆ ತಡರಾತ್ರಿ ರಸ್ತೆಯಲ್ಲಿ ಬರುವಾಗ, ಯಾವುದೋ ಹೆಣ್ಣುಮಗಳು ಜೋರಾಗಿ ಅಳೋದು ಕೇಳಿಸಿತು, ಏನು ಎಂದು ನೋಡುವುದರಲ್ಲಿ ಆಕ್ಸಿಡೆಂಟ್ ಆಗೊಯ್ತು. ಈಗ ಒಬ್ಬ ಸೀರಿಯಸ್ ಇದ್ದು ಮಣಿಪಾಲ್ನಲ್ಲಿದ್ದಾನೆ. ಇನ್ನೊಬ್ಬ ಮೆಗ್ಗಾನ್ ಆಸ್ಪತ್ರೆಯಲ್ಲಿದ್ದಾನೆ. ಹೀಗೋಂದು ಸುದ್ದಿ , ಮೂರು ಫೋಟೋ ಒಂದು ಅಳುವ ಸದ್ದಿ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಇದು ಎಲ್ಲಿಯದ್ದು ಎಂದು ಗೂಗಲ್ ರಿವರ್ಸ್ ಸರ್ಚ್ನಲ್ಲಿ ಹುಡುಕಿದಾಗ ಈ ವಿಡಿಯೋ ಹಾಗೂ ಅಲ್ಲಿರುವ ಫೋಟೋಗಳು ಒಂದು ವರುಷದಿಂದ ಇನ್ಸ್ಟಾಗ್ರಾಮ್ ರೀಲ್ಸ್ ಹಾಗೂ FACEBOOK ಮತ್ತು ಯೂಟ್ಯೂಬ್ ಶಾರ್ಟ್ಸ್ ವಿಡಿಯೋ ದಲ್ಲಿ ಅಪ್ಲೋಡ್ ಆಗುತ್ತಲೇ ಸುಮಾರು ನೂರಕ್ಕೂ ಹೆಚ್ಚು ಪ್ರದೇಶಗಳದ್ದು ಎನ್ನುತ್ತಾ ಈ ವಿಡಿಯೋವನ್ನ ಹರಿಬಿಡಲಾಗಿದೆ.
ಸದ್ಯ ಇದೇ ವಿಡಿಯೋವನ್ನು ಸಾಗರ ತಾಲ್ಲೂಕು ಕಾರ್ಗಲ್ನ ಸಮೀಪ ಕಾಣಿಸಿದ್ದು ಎಂದು ಹರಿಬಿಡಲಾಗುತ್ತಿದ್ದು, ಅ. 27 ರಂದು ರಾತ್ರಿ ತಾಲೂಕಿನ ಕಾರ್ಗಲ್ನ ಸಮೀಪ ಕಂಚಿಕೈ ರಸ್ತೆಯಲ್ಲಿ ಎರಡು ಜನ ಬೈಕ್ ಸವಾರರಿಗೆ ದೆವ್ವ ಎದುರಾಗಿ ಅಪಘಾತವಾಗಿದೆ. ಒಬ್ಬರಿಗೆ ತುಂಬಾ ಸೀರಿಯಸ್ ಆಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಮತ್ತು ಇನ್ನೊಬ್ಬರು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುತ್ತಾರೆಂದು ಸೋಶಿಯಲ್ ಮೀಡಿಯಾದಲ್ಲಿ ಸಂದೇಶ ರವಾನೆ ಮಾಡಲಾಗುತ್ತಿದೆ.

ಸದ್ಯ ಈ ಬಗ್ಗೆ ಗಮನ ಹರಿಸಿರುವ ಶಿವಮೊಗ್ಗ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದ್ದಾರೆ. ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಗರದ ಕಾರ್ಗಲ್ನಲ್ಲಿ ಭೂತದ ಕಾಟದ ಕಾರಣ ಇಬ್ಬರು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ ಎಂದು ಫೋಟೋಗಳ ಸಹಿತ ಸುದ್ದಿ ಹರಿದಾಡುತ್ತಿದೆ. ಜನ ಆತಂಕಿತರಾದ ಹಿನ್ನೆಲೆ ತನಿಖೆ ನಡೆಸಿದ ಪೊಲೀಸ್ ಇಲಾಖೆ, ಈ ಸುಳ್ಳು ಸುದ್ದಿ ಹರಡಿ ಕುಚೋದ್ಯ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.
SUMMARY | police department has issued a warning about a video of a ghost going viral in Kanchikai, Kargal police station limits of Sagar taluk in Shivamogga district.
KEYWORDS | police department warning, video of a ghost going viral, Kanchikai, Kargal police station , Sagar taluk in Shivamogga district.