SHIVAMOGGA | MALENADUTODAY NEWS | ಮಲೆನಾಡು ಟುಡೆ Oct 18, 2024
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರದ ಸಮೀಪ ಸಿಗುವ ಗೌತಮಪುರದಲ್ಲಿ MSIL ಮದ್ಯದಂಗಡಿಯಲ್ಲಿ ಕಳ್ಳರು ಕಳ್ಳತನ ಮಾಡಿದ್ದಾರೆ.
ಸಾಗರದ ಗೌತಮಪುರದಲ್ಲಿರುವ ಈ ಮದ್ಯದಂಗಡಿಯ ರೋಲಿಂಗ್ ಶೆಟರ್ ಮುರಿದು ಕಳೆದ ಬುಧವಾರ ರಾತ್ರಿಯೇ ಕಳ್ಳತನವೆಸಗಲಾಗಿದೆ. ನಿನ್ನೆ ಅಂಗಡಿಯನ್ನು ಓಪನ್ ಮಾಡಲು ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದು ಪರಿಶೀಲಿಸಿರುವ ಪೊಲೀಸರಿಗೆ ರೂ.12350 ನಗದು ಹಣ ಮತ್ತು ರೂ.8960 ಮೌಲ್ಯದ ವಿವಿಧ ಮದ್ಯದ ಬಾಕ್ಸ್ ಕಳ್ಳತನವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SUMMARY | Thieves stole from an MSIL liquor shop at Gautamapura near Anandapura in Sagar taluk of Shivamogga district.
KEYWORDS | Thieves stole from an MSIL liquor shop, Gautamapura , Anandapura ,Sagara taluk , Shivamogga district