SHIVAMOGGA | MALENADUTODAY NEWS | ಮಲೆನಾಡು ಟುಡೆ Oct 18, 2024
ಶಿವಮೊಗ್ಗ | ಬೆಳಗಾವಿಯ 86 ವರ್ಷದ ಮಹಿಳೆಯೊಬ್ಬರಿಗೆ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಲ್ಲಿ ಟ್ರಾನ್ಸ್ ಕೆಥೆಟರ್ ಅಯರ‍್ಟಿಕ್ ವಾಲ್ವ್ ಇಂಪ್ಲಾಂಟೇಷನ್’ (ಟಿಎವಿಐ) ನ್ನ ಯಶಸ್ವಿಯಾಗಿ ಮಾಡಲಾಗಿದೆ.
ಏನಿದು?
ಟಿಎವಿಐ ಚಿಕಿತ್ಸೆಯಲ್ಲಿ ಕಿರಿದಾದ ಹೊಂದಿಕೊಳ್ಳುವ ಟ್ಯೂಬ್ (ಕೆಥೆಟರ್) ಅನ್ನು ಕಾಲಿನ ಮೇಲಿನ ಭಾಗ ಅಥವಾ ಎದೆಯ ರಕ್ತನಾಳಗಳ ಮೂಲಕ ಹೃದಯದ ಮಹಾಪಧಮನಿಯ ಕವಾಟದ ಕಡೆಗೆ ರವಾನಿಸಾಗುತ್ತದೆ. ಆ ಮೂಲಕ ಕವಾಟದ ಬದಲಾವಣೆ ಮಾಡಲಾಗುತ್ತದೆ. ನಂಜಪ್ಪ ಲೈಫ್ ಕೇರ್ ಆಸ್ಪತ್ರೆಗೆ ದಾಖಲಾಗಿದ್ದ ಬೆಳಗಾವಿ ಮೂಲದ ವೃದ್ಧೆಗೆ ಈ ಕೆಥೆಟರ್ ಅಯರ‍್ಟಿಕ್ ವಾಲ್ವ್ ಇಂಪ್ಲಾಂಟೇಷನ್ ಮಾಡಲಾಗಿದೆ.
ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಮಹಿಳೆಗ ಅಯರ‍್ಟಿಕ್ ಸ್ಟೆನೋಸಿಸ್ ನಿಂದ ಬಳಲುತ್ತಿದ್ದರು. ಅಂದರೆ ಮಹಾಪಧಮನಿಯ ಕವಾಟ ಕಿರಿದಾಗುವಿಕೆ ಸಮಸ್ಯೆ ಹೊಂದಿದ್ದರು. ಆದರೆ ಅವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡುವುದು ಕಷ್ಟವಾಗಿತ್ತು. ಮೇಲಾಗಿ ಇದಕ್ಕೆ ಕುಟುಂಬಸ್ಥರು ಸಹ ನಿರಾಕರಿಸಿದ್ದರು. ಹೀಗಾಗಿ ಪರ್ಯಾಯವಾಗಿ ಶಸ್ತ್ರಚಿಕಿತ್ಸೆ ರಹಿತ ಟ್ರಾನ್ಸ್‌ಕೆಥೆಟರ್ ಅಯರ‍್ಟಿಕ್ ವಾಲ್ವ್ ಇಂಪ್ಲಾಂಟೇಷನ್ (ಟಿಎವಿಐ) ಕಾರ್ಯವಿಧಾನವನ್ನು ಕೈಗೊಂಡಿದ್ದು, ಅದು ಯಶಸ್ವಿಯಾಗಿದೆ.
ವೈದ್ಯಕೀಯ ತಂಡದಲ್ಲಿ ಬೆಂಗಳೂರಿನ ಹಿರಿಯ ಕಾರ್ಡಿಯಾಲಜಿಸ್ಟ್ ಮತ್ತು ಮೆರಿಲ್ ಲೈಫ್ ಸೈನ್ಸಸ್ ಟಿಎವಿಐ ಕಾರ್ಯಕ್ರಮದ ಡಾ. ಬಿ.ಸಿ.ಶ್ರೀನಿವಾಸ್, ಶಿವಮೊಗ್ಗದ ‘ನಂಜಪ್ಪ ಲೈಫ್ ಕೇರ್’ನ ಹಿರಿಯ ಕಾರ್ಡಿಯಾಲಜಿಸ್ಟ್ ಡಾ.ಜೆ. ನರೇಂದ್ರ ಮತ್ತು ಹಿರಿಯ ಹೃದಯ ಅರಿವಳಿಕೆ ತಜ್ಞ ಡಾ. ಟಿ.ಎಸ್.ಹರೀಶ್ ಇದ್ದರು.
SUMMARY | An 86-year-old woman from Belagavi underwent a transcatheter aortic valve implantation (TAVI) at Nanjappa Life Care Hospital.
KEYWORDS | Belagavi, transcatheter aortic valve implantation (TAVI) at Nanjappa Life Care Hospital.