SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 11, 2025
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳೆರಡು ಸಹ ಅಗತ್ಯ ವಸ್ತುಗಳ ಬೆಲೆ ಏರಿಸಿ ಪರಸ್ಪರ ಒಬ್ಬರ ಮೇಲೆ ಒಬ್ಬರು ಆರೋಪ ಮಾಡುತ್ತಾ ಜನರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಈ ಕೂಡಲೇ ಏರಿಕೆಯಾಗಿರುವ ದರವನ್ನು ಹಿಂಪಡೆಯಬೇಕೆಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಮನೋಹರ್ ಗೌಡ ಆಗ್ರಹಿಸಿದರು.
ಇಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯ ಸರ್ಕಾರವು ಬಿಜೆಪಿ ವಿರುದ್ಧ ಅವರ ಆಡಳಿತದಲ್ಲಿ ಬೆಲೆ ಏರಿಸುತ್ತಿದ್ದಾರೆ ಎಂದು ಹೋರಾಟ ಮಾಡುತ್ತಿದೆ. ಆದರೆ ಇವರು ಮಾಡಿದ್ದು ಅದೇ ಕೆಲಸ. ಮುದ್ರಾಂಕ ಶುಲ್ಕ ಏರಿಕೆ, ಬಸ್ ಪ್ರಯಾಣದ ಏರಿಕೆ ದರದ ಏರಿಕೆ, ವಿದ್ಯುತ್ ಹಾಲಿನ ದರ ಮುಖ್ಯಮಂತ್ರಿಗಳ ಸಂಬಳ ಮೆಟ್ರೋ ದರ ಏರಿಕೆ ಮಾಡಿದ್ದಾರೆ. ಆದರೆ ಬೆಲೆ ಏರಿಕೆಯ ಹೊರೆಯನ್ನು ಕಡಿಮೆ ಮಾಡಲೇ ಇಲ್ಲ. ಕೇಂದ್ರ ಸರ್ಕಾರ ಪೆಟ್ರೋಲ್ , ಗ್ಯಾಸ್ , ಸಾಮಾನ್ಯ ಇನ್ಸೂರೆನ್ಸ್ ಗಳ ಮೇಲೆ, ಹಾಲು -ಮೊಸರಿನ ಮೇಲು ಜಿ.ಎಸ್.ಟಿ, ವಿಧಿಸಿದೆ ಎಂದರು.
ಬಿಜೆಪಿ ಜನ ಸೇವೆಯನ್ನು ಮಾಡುವ ಬದಲು ಹಣವಂತರಿಗಾಗಿ ಆಡಳಿತ ಮಾಡುತ್ತಿದೆ. ಸಂವಿಧಾನದ ಆಶಯದಂತೆ ಸಮಾನತೆಯನ್ನು ಬುಡ ಮೇಲು ಮಾಡಿ ದೇಶದ ಆರ್ಥಿಕತೆಯನ್ನು ದಿವಾಳಿಯ ಅಂಚಿನತ್ತ ತಂದಿರುವುದೇ ಇವರ ಹೆಗ್ಗಳಿಕೆಯಾಗಿದೆ. ಈ ಕೂಡಲೇ ಅಗತ್ಯ ವಸ್ತುಗಳ ಮೇಲೆ ಏರಿಕೆ ಮಾಡಿರುವ ದರವನ್ನು ಇಳಿಸಬೇಕು. ಇಲ್ಲದಿದ್ದರೆ ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಬೆಲೆ ಕಡಿಮೆ ಮಾಡುವುದರ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
SUMMARY | Both the Congress and the BJP are raising the prices of essential commodities and blaming each other and putting people in distress.
KEYWORDS | Congress, BJP, aam Adhmi party,