SHIVAMOGGA | MALENADUTODAY NEWS | ಮಲೆನಾಡು ಟುಡೆ Nov 12, 2024
ಚಿಕ್ಕಮಗಳೂರು | ವಿಚಿತ್ರ ಪ್ರಕರಣವೊಂದು ಬಯಲಿಗೆ ಬಂದಿದ್ದು, ಈ ಸಂಬಂಧ ಪೊಲೀಸರೇ ಸುಮಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಇಲ್ಲಿನ ಯುವಕನೊಬ್ಬ ಬೀದಿ ನಾಯಿ ಜೊತೆಗೆ ಸೆಕ್ಸ್ ಮಾಡಿದ್ದ ದೃಶ್ಯ ಈ ಭಾಗದಲ್ಲಿ ವೈರಲ್ ಆಗಿದೆ.
ಕೊಪ್ಪ ತಾಲೂಕಿನಲ್ಲಿ ಕಳೆದ ತಿಂಗಳ 18 ರಂದು ಘಟನೆ ನಡೆದಿದೆ. ಇಲ್ಲಿನ ಊರೊಂದರ ಬಸ್ ನಿಲ್ದಾಣದಲ್ಲಿ ಯುವಕನೊಬ್ಬ ಬೀದಿ ನಾಯಿ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿರುವ ಸಿಸಿ ಕ್ಯಾಮರಾದ ದೃಶ್ಯ ಎಲ್ಲೆಡೆ ಹರಿದಾಡಿತ್ತು. ಇದೀಗ ಈ ಸಂಬಂಧ ನವೆಂಬರ್ 9 ರಂದು FIR ದಾಖಲಾಗಿದ್ದು, ಆರೋಪಿಯನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆತನ ವಿರುದ್ಧ ಪ್ರಾಣಿ ಹಿಂಸೆಯ ಆರೋಪದ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
SUMMARY | Koppa police have registered a suo motu case on charges of misbehaving with a stray dog.
KEYWORDS | Koppa police, suo motu case, misbehaving with a stray dog,