SHIVAMOGGA | MALENADUTODAY NEWS | ಮಲೆನಾಡು ಟುಡೆ Oct 20, 2024
ಶಿವಮೊಗ್ಗದವರೇ ಆದ ಸೂಪರ್ ಸ್ಟಾರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪರವರ ತಾಯಿ ಸರೋಜಾರವರು ನಿಧನರಾಗಿದ್ದಾರೆ. ವಯೋಸಹಸ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನ ಬೆಂಗಳೂರು ಜಯನಗರದ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲಿ ಅವರು ಇವತ್ತು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸರೋಜಾರವರ ಸಾವಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಖ್ಯಾತ ಚಲನಚಿತ್ರ ನಟ ಹಾಗೂ ಆತ್ಮೀಯರಾದ @KicchaSudeep ಅವರ ತಾಯಿ ಶ್ರೀಮತಿ ಸರೋಜಾ ಅವರು ನಿಧನರಾಗಿರುವ ಸುದ್ದಿ ತಿಳಿದು ತೀವ್ರ ದುಃಖಿತನಾಗಿದ್ದೇನೆ.
ನಟ ಸುದೀಪ್ ಹಾಗೂ ಅವರ ಕುಟುಂಬ ವರ್ಗದವರಿಗೆ ಅವರ ತಾಯಿಯ ನಿಧನದ ದುಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ, ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಓಂ… pic.twitter.com/lskFIGlB4J
— Basavaraj S Bommai (@BSBommai) October 20, 2024
ನಟ ಶ್ರೀ ಕಿಚ್ಚ ಸುದೀಪ್ ಅವರ ತಾಯಿ ಶ್ರೀಮತಿ ಸರೋಜಾ ಅವರು ದೈವಾಧೀನರಾದ ಸುದ್ದಿ ತಿಳಿದು ಮನಸ್ಸಿಗೆ ಅಪಾರ ನೋವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಸುದೀಪ್ ಅವರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ ????@KicchaSudeep pic.twitter.com/tWTMOmKi1X
— DK Shivakumar (@DKShivakumar) October 20, 2024
ಖ್ಯಾತ ನಟ ಸುದೀಪ್ ಅವರ ಮಾತೃಶ್ರೀ ಶ್ರೀಮತಿ ಸರೋಜಾ ಸಂಜೀವ್ ಅವರ ನಿಧನಕ್ಕೆ ಸಂತಾಪ ಕೋರುವೆ. ಖ್ಯಾತ ನಿರ್ಮಾಪಕರಾದ ಶ್ರೀ ಸಂಜೀವ್ ಅವರ ಧರ್ಮ ಪತ್ನಿಯೂ ಆದ ಮೃತರ ಅಗಲಿಕೆಯ ನೋವು ಸಹಿಸುವ ಶಕ್ತಿ ಕುಟುಂಬ ವರ್ಗಕ್ಕೆ ದೇವರು ಕರುಣಿಸಲಿ, ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುವೆ.
ಓಂ ಶಾಂತಿ????@KicchaSudeep pic.twitter.com/1IkrWzF7RD— Vijayendra Yediyurappa (@BYVijayendra) October 20, 2024
SUMMARY | Former Chief Minister Basavaraj Bommai, Deputy Chief Minister DK Shivakumar, BJP state president BY Vijayendra and others condoled the death of Sudeep’s mother Saroja. .
KEYWORDS | Former Chief Minister Basavaraj Bommai, Deputy Chief Minister DK Shivakumar, BJP state president BY Vijayendra , condoled the death of kichha Sudeep mother Saroja, ಕಿಚ್ಚ ಸುದೀಪರವರ ತಾಯಿ ನಿಧನ