SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 21, 2025
ಕೆಲವು ಟ್ರೋಲರ್‌ಗಳು ಬಿಗ್‌ಬಾಸ್ ಸ್ಪರ್ಧಿ ರಜತ್ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಅದನ್ನು ಡಿಲೀಟ್ ಮಾಡಬೇಕೆಂದರೆ ಹಣ ನೀಡಬೇಕೆಂದು ರಜತ್ ಪತ್ನಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ರಜತ್ ಪತ್ನಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ವೈಲ್ಡ್ ಕಾರ್ಡ್ ಸ್ಫರ್ಧಿಯಾಗಿ ಬಿಗ್‌ಬಾಸ್‌ಗೆ ಎಂಟ್ರಿಕೊಟ್ಟ ರಜತ್ ಈಗಾಗಲೇ ಫೈನಲ್ ವೀಕ್ ತಲುಪಿದ್ದಾರೆ. ಅಷ್ಟೇ ಅಲ್ಲದೆ ಎಲ್ಲಾ ಟಾಸ್ಕ್‌ಗಳಲ್ಲಿಯೂ ಉತ್ತಮವಾಗಿ ಪ್ರದರ್ಶನ ನೀಡಿ ತಮ್ಮ ನೇರ ನುಡಿಯಿಂದಾಗಿ ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ. ಅವರ ಫೇಮ್ ಹೆಚ್ಚಾಗ್ತಿದ್ದಂತೆ ರಜತ್ ಹಾಗೂ ಅವರ ಮಾಜಿ ಗೆಳತಿಯ ಖಾಸಗಿ ಫೋಟೋಗಳನ್ನು ಟ್ರೋಲರ್‌ಗಳು ಇನ್ಸ್ಟಾಗಾಮ್‌ನಲ್ಲಿ ಹರಿಬಿಟ್ಟಿದ್ದಾರೆ. ಇದರಿಂದ ಮನನೊಂದ ರಜತ್ ಪತ್ನಿ ಪತಿಯ ಫೋಟೋಗಳನ್ನು ಡಿಲೀಟ್ ಮಾಡುವಂತೆ ಪೇಜ್‌ಗಳಿಗೆ ವೈಯಕ್ತಿಕ ಸಂದೇಶ ಕಳುಹಿಸಿದ್ದಾರೆ. ಆದರೆ ಟ್ರೋಲರ್‌ಗಳು ವಿಡಿಯೋವನ್ನು ಡಿಲೀಟ್ ಮಾಡಬೇಕೆಂದರೆ ಹಣ ನೀಡಿ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು, ಆಗ ರಜತ್ ಪತ್ನಿ ಟ್ರೋಲರ್‌ಗಳಿಗೆ ಹಂತಹಂತವಾಗಿ ಇದುವರೆಗೆ ಅನ್ಲೈಲ್ ಪೇಮೆಂಟ್ ಮೂಲಕ 6500 ರೂಪಾಯಿಗಳನ್ನು ನೀಡಿದ್ದಾರೆ, ಆದರೆ ಟ್ರೋಲರ್‌ಗಳು ಹಣ ಪಡೆದುಕೊಂಡು ಬೇರೆ ಟ್ರೋಲ್ ಪೇಜ್‌ಗಳನ್ನು ತೆರೆದು ಪತಿ ರಜತ್ ಮತ್ತು ಅವರ ಮಾಜಿ ಗೆಳತಿಯ ವೈಯಕ್ತಿಕ ಪೋಟೋ ಅಪ್‌ಲೋಡ್ ಮಾಡುತ್ತಿದ್ದಾರೆ ಎಂದು ರಜತ್ ಪತ್ನಿ ಆರೋಪಿಸಿದ್ದಾರೆ. ಈ ಹಿನ್ನಲೆ ಆರೋಪಿಗಳ ವಿರುದ್ದ ಪ್ರಕರಣ ದಾಗಲಾಗಿದೆ.
SUMMARY | Some trollers have circulated private photos of Bigg Boss contestant Rajat on social media and demanded money from Rajat’s wife to delete them.
KEYWORDS | Bigg Boss, social media, Rajat,