SHIVAMOGGA | MALENADUTODAY NEWS | ಮಲೆನಾಡು ಟುಡೆ Jan 24, 2025
ಉಸಿರಾಟದ ಸಮಸ್ಯೆಯೊಂದು ಬದುಕಿ ಬಾಳಬೇಕಿದ್ದ 25 ವರುಷದ ಯುವತಿಯ ಜೀವನ ಕೊನೆಗೊಳ್ಳಲು ಕಾರಣವಾದ ಘಟನೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ನೇತಾಜಿ ಸರ್ಕಲ್ ಬಳಿ ದೈವಜ್ಞ ಬ್ರಾಹ್ಮಣರ ಕುಟುಂಬವೊಂದ ತಮ್ಮ ಪಾಡಿಗೆ ಬದುಕಿನ ದಿನಗಳನ್ನು ಸಾಗಿಸುತ್ತಾ ಬಂದಿತ್ತು. ಇಲ್ಲಿನ ದಂಪತಿಗೆ ಸೌಮ್ಯ ಎಂಬ ಮಗಳಿದ್ದು, ಆಕೆ ಮಾಚೇನಹಳ್ಳಿಯಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ವರ್ಕ್ ಫ್ರಾಮ್ ಹೋಮ್ ಮಾಡುತ್ತಿದ್ದ ಆಕೆಗೆ ಉಸಿರಾಟದ ಸಮಸ್ಯೆಯು ಕಾಡುತ್ತಿತ್ತು ಎಂದು ಮನೆಯವರು ಹೇಳುತ್ತಾರೆ.
ಈ ಕಾರಣಕ್ಕೆ ಸೌಮ್ಯಳಿಗೆ ಹಲವು ಸಲ ಟ್ರೀಟ್ಮೆಂಟ್ ಸಹ ನೀಡಲಾಗಿತ್ತು. ಈ ನಡುವೆ ಸೌಮ್ಯ ಇದ್ದಕ್ಕಿದ್ದಂತೆ ಮನೆ ಬೆಡ್ರೂಂನಲ್ಲಿನ ಸ್ಟೀಲ್ ಫೋಲ್ಸ್ಗೆ ಸೀರೆ ಕಟ್ಟಿ ನೇಣಿಗೆ ಶರಣಾಗಿದ್ದಾರೆ. ಇವರ ಸಾವು ಇಡೀ ಕುಟುಂಬವನ್ನು ಕಂಗಾಲಾಗಿಸಿದೆ. ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯ ಪೊಲೀಸರು ಯುಡಿಆರ್ ದಾಖಲಿಸಿಕೊಂಡಿದ್ದಾರೆ.
SUMMARY | Young woman hanged herself near Nejaji Circle under Shimoga Tunganagar Police Station.

KEY WORDS | Young woman hanged herself, Nejaji Circle , Shimoga Tunganagar Police Station