SHIVAMOGGA | MALENADUTODAY NEWS | ಮಲೆನಾಡು ಟುಡೆ Oct 15, 2024
ಬೆಂಗಳೂರು | ನಿನ್ನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದ್ದು ಎನ್ನಲಾದ ಸರಗಳ್ಳತನದ ವಿಡಿಯೊವೊಂದು ಎಲ್ಲೆಡೆ ವೈರಲ್ ಆಗಿತ್ತು. ಇದೀಗ ವಿಡಿಯೋದ ಮೂಲ ತಿಳಿದುಬಂದಿದ್ದು, ವೈರಲ್ ವಿಡಿಯೋ ಬೆಂಗಳೂರು ನಗರದಲ್ಲಿ ನಡೆದಿರುವ ಘಟನೆಯದ್ದು ಎನ್ನಲಾಗಿದೆ.
ಹಿಂದೂಸ್ತಾನ್ ಟೈಮ್ಸ್‌ನಲ್ಲಿನ ರಿಪೋರ್ಟ್‌ನ ಪ್ರಕಾರ, ಬೆಂಗಳೂರು ಶಂಕರ್ ನಗರದಲ್ಲಿನ ದೇವಾಲಯವೊಂದರಲ್ಲಿ ನಡೆದ ಘಟನೆಯ ದೃಶ್ಯವು ವೈರಲ್ ಆಗುತ್ತಿದೆ. ಈ ಸಂಬಂಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
ನಡೆದಿದ್ದೇನು ದೇವಸ್ಥಾನವೊಂದರಲ್ಲಿ ಮಹಿಳೆಯರು ಸಾಮೂಹಿಕ ಭಜನೆ ನಡೆಸ್ತಿದ್ದ ಸಂದರ್ಭದಲ್ಲಿ ಕಿಟಕಿ ಪಕ್ಕ ಕುಳಿತಿದ್ದ ಮಹಿಳೆಯ ಕುತ್ತಿಗೆಗೆ ಹೊರಗಡೆಯಿಂದ ಕೈ ಹಾಕಿದ ವ್ಯಕ್ತಿ ಚಿನ್ನದ ಸರವನ್ನ ಕಿತ್ತುಕೊಂಡು ಪರಾರಿಯಾಗಿದ್ದ. ಈ ಘಟನೆಯಿಂದ ದೇವಾಲಯದಲ್ಲಿದ್ದವರು ಪಾನಿಕ್ ಆಗಿದ್ದರು. ಅದರ ದೃಶ್ಯವೂ ವೈರಲ್ ಆಗಿತ್ತು.
Summary | Yesterday, a video of the alleged chain-snatching at Sagar in Shivamogga district had gone viral. The source of the video has now been ascertained and the viral video is said to be from an incident that took place in Bengaluru city.
chain-snatching at Sagar, in Shivamogga district , viral video, viral video of bengaluru, incident that took place in Bengaluru city, Hindustan Times