ಬಡ್ಡಿ ದುಡ್ಡಿಗೆ ಹೆಂಗಸರ ಬೆದರಿಕೆ | ಡಿಕ್ಕಿಯಾದ ಬೈಕ್‌ನಲ್ಲಿತ್ತು ಮಾಲು | 6 ಕೋಳಿ ,5 ಮಂದಿ, 400 ಕ್ಯಾಶ್‌ ವಶಕ್ಕೆ | ಥರಥರ ಸುದ್ದಿ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 22, 2025 ‌‌ 

ಶಿವಮೊಗ್ಗ : ಸುದ್ದಿ 1 : ಕಿಶೋರ ಕಾರ್ಮಿಕ ಪತ್ತೆ  | ಬಾಲ ಕಾರ್ಮಿಕ ಕಾಯ್ದೆಯನ್ವಯ ಶಿಕಾರಿಪುರ ತಾಲ್ಲೂಕಿನ ಎಸ್.ಎಸ್ ರಸ್ತೆಯಲ್ಲಿರುವ ಆಟೋಮೊಬೈಲ್‌ಗೆ ಅಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸಿದ್ದಾರೆ. ಈ ವೇಳೆ ಅಲ್ಲೊಬ್ಬ ಬಾಲ ಕಾರ್ಮಿಕ ಪತ್ತೆಯಾಗಿದ್ದಾನೆ. 

ಪ್ಯಾನ್ ಇಂಡಿಯಾ ರೆಸ್ಕ್ಯೂ & ರಿಹ್ಯಾಬಿಲಿಟೇಷನ್ ಕ್ಯಾಂಪೇನ್ 2.0 ಪ್ರಯುಕ್ತ ರಾಷ್ಟಿಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೂಚಿಸಿದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಕಾರ್ಮಿಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಮತ್ತು ಮಕ್ಕಳ ಸಹಾಯವಾಣಿಯ ಸಿಬ್ಬಂದಿಗಳು ಈ ದಾಳಿ ನಡೆಸಿದ್ದು, ದಾಳಿ ವೇಳೆ ಪತ್ತೆಯಾಗಿರುವ ಕಿಶೋರ ಕಾರ್ಮಿಕನನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ದಾಖಲಿಸಲಾಗಿದೆ.

ಸುದ್ದಿ  2 : ರಾತ್ರಿ ಇದ್ದ ಬೈಕ್‌ ಬೆಳಗ್ಗೆ ಮಾಯ | ಮನೆ ಮುಂದೆ ರಾತ್ರಿ ನಿಲ್ಲಿಸಿದ್ದ ಬೈಕ್‌ವೊಂದನ್ನ ಬೆಳಗಾಗುವಷ್ಟರಲ್ಲಿ ಕಳ್ಳರು ಕದ್ದಿರುವ ಘಟನೆ ಶಿವಮೊಗ್ಗ ತುಂಗಾನಗರ ಪೊಲೀಸ್‌ ಠಾಣೆಯ ಲಿಮಿಟ್ಸ್‌ನಲ್ಲಿ ವರದಿಯಾಗಿದೆ. ಗೋಪಾಳದ ಏಳನೇ ಮೈನ್‌ ನಲ್ಲಿ ರಾಮಕೃಷ್ಣ ಶಾಲೆ ಹತ್ತಿರ ಈ ಘಟನೆ ನಡೆದಿದೆ. ಹೀರೋ ಕಂಪನಿ ಬೈಕ್‌ನನ್ನು ಅದರ ಮಾಲೀಕರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದರು. ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಬೈಕ್‌ ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. 

 

ಸುದ್ದಿ 3 : ಸಾಲದ ಹಣಕ್ಕೆ ಮನೆಗೆ ನುಗ್ಗಿ ಹಲ್ಲೆ |  ಬಡ್ಡಿ ದುಡ್ಡಿಗಾಗಿ ಮನೆಗೆ ಹೆಂಗಸರನ್ನು ನುಗ್ಗಿಸಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ ಆರೋಪ ಸಂಬಂದ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. ದೊಡ್ಡಪೇಟೆ ಲಿಮಿಟ್ಸ್‌ ದೆಲ್ಲಿ ದರ್ಬಾರ್‌ ಹೋಟೆಲ್‌ ಹಿಂಭಾಗದಲ್ಲಿ ನೆಲಸಿರುವ ಸಂತ್ರಸ್ತರು ಇನ್ನೊಬ್ಬರ ಬಳಿಯಲ್ಲಿ ಐದು ಲಕ್ಷಕ್ಕೂ ಸಾಲ ಪಡೆದಿದ್ದರು. ಅದಕ್ಕೆ ಪ್ರತಿಯಾಗಿ ಫೋನ್‌ ಪೇ, ಪೇಟಿಎಂ ಪೇ ಮೂಲಕ ಹಾಗೂ ಬೈ ಹಾಂಡ್‌ ಹಣವನ್ನು ವಾಪಸ್‌ ಕೊಟ್ಟಿದ್ದಾರೆ. ಆನಂತರವೂ ಬಡ್ಡಿ ಕಟ್ಟುವಂತೆ ತಿಳಿಸಿದ್ದಕ್ಕೆ ಸಂತ್ರಸ್ತರು ತಮ್ಮ ಹಿರಿಯರನ್ನು ಕೂರಿಸಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಹಣ ಕೇಳುವುದಿಲ್ಲ ಎಂದು ಒಪ್ಪಿದವರು ಮತ್ತೆ ಸಂತ್ರಸ್ತರ ಮನೆಗೆ ಹೆಂಗಸರ ಜೊತೆಗೆ ಬಂದು ಹಲ್ಲೆ ಮಾಡಿಸಿದ್ದಾರೆ ಎಂಬುದು ಆರೋಪ

ಸುದ್ದಿ 4 : ಆಕ್ಸಿಡೆಂಟ್‌ ವೇಳೆ ಸಿಕ್ತು ಗಾಂಜಾ | ಶಿವಮೊಗ್ಗದ ತುಂಗಾನಗರ ಸರ್ಕಾರಿ ಶಾಲೆಯ ಎದುರು ಬೈಕ್‌ ಸವಾರರು ಬೈಕನ್ನು ಯುವಕನಿಗೆ ಡಿಕ್ಕಿ ಹೊಡೆದು ಅಲ್ಲಿಂದ ಎಸ್ಕೇಪ್‌ ಆಗಿದ್ದರು. ಸ್ಥಳದಲ್ಲಿಯೆ ಬೈಕ್‌ ಬಿಟ್ಟು ಎಸ್ಕೇಪ್‌ ಆಗಿದ್ದ ಬಗ್ಗೆ ಸ್ಥಳಿಯರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಬೈಕ್‌ನ ಪೆಟ್ರೋಲ್‌ ಟ್ಯಾಂಕ್‌ ಕವರ್‌ನೊಳಗೆ ಗಾಂಜಾ ಹಾಗೂ ಅದನ್ನು ಸೇದುವ ಚಿಲುಮೆ ಪತ್ತೆಯಾಗಿದೆ. ಈ ಸಂಬಂಧ ಕೇಸ್‌ ದಾಖಲಿಸಿರುವ ಪೊಲೀಸರು ಬೈಕ್‌ ಜಪ್ತಿ ಮಾಡಿಕೊಂಡಿದ್ದಾರೆ. 

ಸುದ್ದಿ 5 : 6 ಕೋಳಿ ,5 ಮಂದಿ, 400 ಕ್ಯಾಶ್‌ ವಶಕ್ಕೆ  |ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆಯ ಸಮೀಪ ಕೋಟೆಕೆರೆ ಗ್ರಾಮದ ಕಾಡಿನಲ್ಲಿ ಕೋಳಿಪಡೆ ನಡೆಸಲಾಗ್ತಿದೆ ಎಂಬ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಹೋಗಿ ರೇಡ್‌ ಮಾಡಿದ್ದಾರೆ. ಈ ವೇಳೆ ಐವರು ಆರೋಪಿಗಳು ಸಿಕ್ಕಿಬಿದ್ದಿದ್ದು, ನಾನೂರು ರೂಪಾಯಿ ಕ್ಯಾಶ್‌ ಹಾಗೂ ಆರು ಕೋಳಿಗಳನ್ನು ಜಪ್ತು ಮಾಡಿದ್ದಾರೆ. ಅಲ್ಲದೆ ಆರೋಪಿಗಳ ವಿರುದ್ಧ ಕೇಸ್‌ ದಾಖಲಿಸಿದ್ದಾರೆ.  

SUMMARY | shivamogga news 

KEY WORDS |‌  shivamogga news 

Share This Article