SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 17, 2024
ಸೆಪ್ಟೆಂಬರ್ 12 ರಂದು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕಾವೇರಿ ಶರಾವತಿ ವಿಭಾಗದ ಕೈದಿಗಳ ನಡುವೆ ಹೊಡೆದಾಟ ನಡೆದಿದೆ. ಈ ಹೊಡೆದಾಟ ಎಫೆಕ್ಟ್ ಎಂಬಂತೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲುಸ್ತುವಾರಿಯನ್ನ ಸ್ವತಃ ಕಾರಾಗೃಹ ಇಲಾಖೆ ಡಿಐಜಿ ದಿವ್ಯಶ್ರಿಯವರು ನೋಡಿಕೊಳ್ಳುತ್ತಿದ್ಧಾರೆ.
ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಡಾ.ಪಿ ರಂಗನಾಥ್
ಈ ನಡುವೆ ಕಲಬುರಗಿ ಕಾರಾಗೃಹಕ್ಕೆ ಶಿವಮೊಗ್ಗದಿಂದ ವರ್ಗಾವಣೆ ಆಗಿದ್ದ ಡಾ.ಪಿ ರಂಗನಾಥ್ ರವನ್ನ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿದೆ. ಇವತ್ತು ಅವರು ಕೇಂದ್ರ ಕಾರಾಗೃಹದ ಅಧೀಕ್ಷಕರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಶಿವಮೊಗ್ಗ ಕೇಂದ್ರ ಕಾರಾಗೃಹದ ಅಧೀಕ್ಷಕಿ ಡಾ.ಅನಿತಾ ಆರ್ ರವರನ್ನ ವರ್ಗಾವಣೆ ಮಾಡಲಾಗಿದೆ. 12 ನೇ ತಾರೀಖು ನಡೆದ ಘಟನೆ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ.
ಇನ್ನೂ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಅಧೀಕ್ಷಕರಾಗಿದ್ದ ಡಾ.ಆರ್ ರಂಗನಾಥ್‌ರವರು ಹಲವು ಸೂಕ್ಷ್ಮ ಹಾಗೂ ಪರಿವರ್ತನಾ ಕ್ರಮಗಳಿಂದ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಸಾಕಷ್ಟು ಸುಧಾರಣೆಗಳನ್ನ ತಂದಿದ್ದರು. ಇವರ ಅವಧಿಯಲ್ಲಿ ಹಲವು ಕೈದಿಗಳು ತಮ್ಮದೇ ಬದುಕಿನ ದಾರಿಯನ್ನ ಬದಲಿಸಿಕೊಂಡು, ಹೊಸ ದಾರಿಯನ್ನ ಕಂಡುಕೊಂಡಿದ್ದರು.
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಕುಸಿದು ಬಿದ್ದ ವ್ಯಕ್ತಿ ಸಾವು ತೀರ್ಥಹಳ್ಳಿ: ತಾಲೂಕಿನ ಬೇಗುವಳ್ಳಿಯಲ್ಲಿ ಗಣಪತಿ ವಿಸರ್ಜನೆ ವೇಳೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬರು ಹಠಾತ್ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಿದರಹಳ್ಳಿಯ ಶಾಮಣ್ಣ ಮೃತರಾದವರು. ಭಾನುವಾರ ರಾತ್ರಿ 11ಸುಮಾರಿಗೆ ನಡೆಯುತ್ತಿದ್ದ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಮೃತರು ಪಾಲ್ಗೊಂಡಿದ್ದು ಮೆರವಣಿಗೆ ಹೋಗುತ್ತಿದ್ದ ವೇಳೆ ಧಿಡೀರನೆಕುಸಿದು ಬಿದ್ದು ಸ್ಥಳದಲ್ಲಿ ಮೃತರಾಗಿದ್ದಾರೆ. ಮೆರವಣಿಗೆಯಲ್ಲಿ ಬಳಸಿದ್ದ ಡಿಜೆ ಶಬ್ದದಿಂದಾಗಿ ಹೃದಯ ಘಾತವಾಗಿರಬಹುದು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.