SHIVAMOGGA | MALENADUTODAY NEWS | ಮಲೆನಾಡು ಟುಡೆ Oct 18, 2024
ಶಿವಮೊಗ್ಗ ಪೊಲೀಸ್ ಇಲಾಖೆ ಸಂಚಾರ ನಿಯಮಗಳನ್ನ ಕಟ್ಟುನಿಟ್ಟು ಜಾರಿಗೊಳಿಸುವುದರ ಜೊತೆ ದಂಡ ವಸೂಲಿಯಲ್ಲಿ ಹೆಚ್ಚು ಶಿಸ್ತನ್ನ ಮೂಡಿಸುತ್ತಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಕಾರು ಮಾಲೀಕನೊಬ್ಬರಿಗೆ ಬರೋಬ್ಬರಿ 11 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ದಂಢದ ರಸೀದಿಯೇ ಹೆಚ್ಚು ಕಮ್ಮಿ ಒಂದು ಮಾರು ಉದ್ದವಿದ್ದು, ಜನರಲ್ಲಿ ಅಚ್ಚರಿ ಮೂಡಿಸುತ್ತಿದೆ.
ನಡೆದಿದ್ದೇನು?
ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ PSI ರವರು ಈ ದಿನ ವಾಹನ ತಪಾಸಣೆ ಮಾಡುತ್ತಿದದ ಸಂದರ್ಭದಲ್ಲಿ ಕಾರೊಂದರ ದಾಖಲೆಗಳನ್ನ ಪರಿಶೀಲಿಸಿದ್ದಾರೆ.
ಈ ವೇಳೇ ಕಾರಿನ ಮೇಲೆ ಹಲವು ದಂಡಗಳು ಇರುವುದು ಗಮನಕ್ಕೆ ಬಂದಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ದಂಡದ ಮೊತ್ತವೇ 11,000 ಇರುವುದು ಗೊತ್ತಾಗಿದೆ. ಹೀಗಾಗಿ ವಾಹನ ಮಾಲೀಕರಿಂದ ಪೂರ್ಣ ದಂಡದ ಮೊತ್ತವನ್ನು ಕಟ್ಟಿಸಿಕೊಂಡು ಅವರಿಗೆ ರಸೀದಿ ನೀಡಿದ್ದಾರೆ.
ಈ ವಿಚಾರವನ್ನ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಟ್ವೀಟ್ ಮಾಡಿದ್ದು, ಫೋಟೋವನ್ನ ಹಂಚಿಕೊಂಡಿದ್ದಾರೆ.
SUMMARY | The PSI Shivamogga West Traffic Police Station, while checking the vehicle today, found that a person had a fine of Rs.11,000 for violating traffic rules on his car and the entire fine amount was paid by the owner of the said car. @DgpKarnataka @KarnatakaVarthe @KarnatakaCops
KEYWORDS | PSI Shivamogga ,West Traffic Police Station, checking the vehicle today, violating traffic rules