SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 9, 2024 | SHIVAMOGGA WATER SUPPLY |
ಪ್ರೀತಿಸಿದ ಹುಡುಗಿ ಕೈ ಮೇಲೆ ಟೈಲ್ಸ್‌ನಿಂದ ಜಜ್ಜಿದ ಪ್ರೇಮಿ
ಪ್ರೇಮ ನಿವೇದನೆಯನ್ನ ತಿರಸ್ಕರಿಸಿದ್ದಕ್ಕೆ ಯುವಕನೊಬ್ಬ ಯುವತಿಯೊಬ್ಬಳ ಕೈಯನ್ನ ಟೈಲ್ಸ್‌ನಿಂದ ಜಜ್ಜಿರುವ ಘಟನೆಯ ಬಗ್ಗೆ ಶಿವಮೊಗ್ಗ ತಾಲ್ಲೂಕನ ಸ್ಟೇಷನ್ ಒಂದರಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣ ದೂರು ಕೊಟ್ಟ ಬಳಿಕ ಬೆಳಕಿಗೆ ಬಂದಿದ್ದು, ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಳೆ. ಇನ್ನೂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಪ್ರಾಪ್ತೆಗೆ ಮದ್ಯ ಕುಡಿಸಿದವರ ಬಂಧನಕ್ಕೆ ಒತ್ತಾಯ
ಅಪ್ರಾಪ್ತೆಯೊಬ್ಬಳಿಗೆ ಮದ್ಯ ಕುಡಿಸಿ ವಿಕೃತಿ ಮರೆದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲೆ ತಾಲ್ಲೂಕು ಒಂದರಲ್ಲಿ ಈ ರೀತಿಯ ಘಟನೆ ನಡೆದಿದ್ದು, ಅಂತವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬಾವಿಗೆ ಬಿದ್ದ ಮಹಿಳೆಯ ರಕ್ಷಣೆ
ತೀರ್ಥಹಳ್ಳಿಯ ಕುಡುಮಲ್ಲಿಗೆ ಬಳಿ ಆಯತಪ್ಪಿ ಬಾವಿಗೆ ಬಿದ್ದ ಮಹಿಳೆಯೊಬ್ಬರನ್ನ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. 58 ವರ್ಷದ ಮಹಿಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದರು, ಅದೃಷ್ಟಕ್ಕೆ ಬಾವಿ ಬುಡದಲ್ಲಿದ್ದ ಬೇರನ್ನ ಹಿಡಿದು ಸಹಾಯಕ್ಕಾಗಿ ಕೂಗುತ್ತಿದ್ದರು. ಇದನ್ನ ಕೇಳಿಸಿಕೊಂಡ ಅವರು ಬಾವಿ ಬಳಿ ಬಂದು ನೋಡಿದ್ದಾರೆ. ಆ ಬಳಿಕ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಅವರು ಮಹಿಳೆಯನ್ನ ರಕ್ಷಣೆ ಮಾಡಿದ್ದಾರೆ.
SUMMARY | Demand for arrest of those who consumed liquor to minor | Man crushes girl with tiles on her hand | Woman rescued after falling into well
KEYWORDS | Shivamogga, Preethi Prema, Kote Police Station, Hindu Jagarana Vedike, Deputy Commissioner’s Office, Thirthahalli Kudumallige,