SHIVAMOGGA | MALENADUTODAY NEWS | ಮಲೆನಾಡು ಟುಡೆ Nov 3, 2024
ಶಿವಮೊಗ್ಗ | ಪತ್ರಕರ್ತರ ಸೋಗಿನಲ್ಲಿ ತಡರಾತ್ರಿ ಲಾರಿಯೊಂದನ್ನ ಅಡ್ಡಗಟ್ಟಿ ಸುಲಿಗೆ ಮಾಡಲು ಪ್ರಯತ್ನಿಸಿದ ಐವರನ್ನ ಶಿವಮೊಗ್ಗ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ
ಶಿವಮೊಗ್ಗದಲ್ಲಿ ಇತ್ತೀಚೆಗೆ ಪತ್ರಕರ್ತರ ಹೆಸರಿನಲ್ಲಿ ವಿವಿಧ ಇಲಾಖೆಗಳು ಮಾಡಬೇಕಾದ ಕೆಲಸದಲ್ಲಿ ಮೂಗು ತೂರಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಖಡಕ್ ಕ್ರಮವನ್ನ ಕೈಗೊಂಡಿದೆ. ಜಿಲ್ಲೆಯಲ್ಲಿ ನಡೆಯುವ ವಹಿವಾಟಿನಲ್ಲಿ ಆಗುವ ನಿಯಮ ಉಲ್ಲಂಘನೆಗಳನನ್ನ ಪರಿಶೀಲಿಸಲು ಆಯಾ ವಿಚಾರಕ್ಕೆ ಸಂಬಂಧಿಸಿದ ಕಚೇರಿಗಳು ಇವೆ. ಅಲ್ಲಿಯ ಅಧಿಕಾರಿಗಳು ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ನಡುವೆ ಪತ್ರಕರ್ತ ಎಂದು ಹೇಳಿಕೊಳ್ಳುವ ವ್ಯಕ್ತಿಗಳು ಆಯ್ದ ವ್ಯಕ್ತಿಗಳನ್ನ ಸಂಸ್ಥೆಘಳನ್ನು ಟಾರ್ಗೆಟ್ ಮಾಡಿ ಬೆದರಿಕೆ ಹಾಕುತ್ತಿರುವ ಬಗ್ಗೆ ಪೊಲೀಸ್ ಇಲಾಖೆಗೂ ಮಾಹಿತಿ ಇದೆ.
ಇದಕ್ಕೆ ಪೂರಕ ಸಾಕ್ಷಿ ಎಂಬಂತೆ ಹೊಳೆಹೊನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆಯೊಂದು ನಡೆದಿದೆ. ಅಡಿಕೆ ಸಾಗಿಸುತ್ತಿದ್ದ ಲಾರಿಯೊಂದನ್ನ ಅಡ್ಡಗಟ್ಟಿ ತಾವು ಪತ್ರಕರ್ತರು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಲಾರಿಗೆ ಸಂಬಂಧಿಸಿದ ಹಾಗೂ ಲಾರಿಯಲ್ಲಿದ್ದ ಅಡಿಕೆಗೆ ಸಂಬಂಧಿಸಿದ ದಾಖಲಾತಿಗಳನ್ನ ಕೊಡುವಂತೆ ಒತ್ತಾಯಿಸಿದ್ದಲ್ಲದೆ ಮೂವತ್ತು ಲಕ್ಷ ರೂಪಾಯಿ ಕೊಡುವಂತೆ ಬೆದರಿಕೆ ಹಾಕಿದ್ದರಂತೆ. ಇದಕ್ಕೆ ಲಾರಿಯ ಚಾಲಕ ವಿರೋಧಿಸಿದ್ದಾನೆ. ಅಲ್ಲದೆ ವಿಚಾರವನ್ನ ಸಂಬಂಧಪಟ್ಟವರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಲಾರಿ ಹಾಗೂ ಅದರಲ್ಲಿದ್ದ ಅಡಿಕೆಗೆ ಸಂಬಂಧಿಸಿದವರು ಬಂದಿದ್ದಾರೆ. ಅವರಿಗೂ ಅಲ್ಲಿದ್ದ ಆರೋಪಿಗಳು ಬೆದರಿಕೆ ಒಡ್ಡಿದ್ದಾರೆ.
ಇದರ ಬೆನ್ನಲ್ಲೆ ದೂರೊಂದನ್ನ ಆಲಿಸಿ ಸ್ಥಳಕ್ಕೆ 112 ಪೊಲೀಸರು ಬಂದಿದ್ದಾರೆ. ಸ್ಥಳಕ್ಕೆ ಬಂದ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು ಸಂಬಂಧ ಪಟ್ಟ ಠಾಣೆಗೆ ಮಾಹಿತಿ ನೀಡಿದ್ದಾರೆ. ಇವೆಲ್ಲದರ ನಂತರ ಐವರ ವಿರುದ್ಧ ಸುಲಿಗೆ ಪ್ರಕರಣ ದಾಖಲಾಗಿದ್ದು, ಐವರನ್ನೂ ಸಹ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಮೇಲಾಗಿ ಈ ಬಗ್ಗೆ ಮಲೆನಾಡು ಟುಡೆಗೆ ಸ್ಪಷ್ಟನೆ ನೀಡಿದ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್, ಪತ್ರಕರ್ತ ಎಂದು ಹೇಳಿಕೊಂಡು ಸುಲಿಗೆ ಮಾಡಿದ ಆರೋಪ ಸಂಬಂಧ ಐವರನ್ನ ಬಂಧಿಸಲಾಗಿದೆ. ಈ ರೀತಿಯಲ್ಲಿ ಜನರನ್ನ ಬೆದರಿಸುವ ಹಾಗೂ ಸುಲಿಗೆ ಮಾಡುವ ಕೃತ್ಯವನ್ನ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಈ ನಿಟ್ಟಿನಲ್ಲಿ ಸಂತ್ರಸ್ತರು ತಕ್ಷಣವೇ ದೂರು ನೀಡಿದ್ದಲ್ಲಿ ಆರೋಪಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
SUMMARY | Holehonnur police have arrested five persons in connection with the extortion case
KEYWORDS | Holehonnur police, in connection with the extortion case