SHIVAMOGGA | MALENADUTODAY NEWS | ಮಲೆನಾಡು ಟುಡೆ Nov 10, 2024
ಶಿವಮೊಗ್ಗದಲ್ಲಿ ನಿನ್ನೆ ದಿನ ನಡೆದ ಘಟನೆಗಳ ಸಂಕ್ಷಿಪ್ತ ಮಾಹಿತಿಯ ವಿವರ ಇವತ್ತಿನ TODAY SHORT NEWS ನಲ್ಲಿ
ಶಿಕಾರಿಪುರ | ಪತ್ನಿಯ ಕೊಲೆ
ಶಿಕಾರಿಪುರ ತಾಲ್ಲೂಕು ಅಂಬ್ಲಿಗೊಳ್ಳ ಗ್ರಾಮದಲ್ಲಿ ನಿನ್ನೆದಿನ ಶನಿವಾರ ರಾತ್ರಿ ಫೋನ್ ನಲ್ಲಿ ಮಾತಾಡುತ್ತಿದ್ದ ಪತ್ನಿ, ಪತಿಗೆ ಊಟ ಹಾಕಿಕೊಡಲು ನಿರಾಕರಿಸಿದ್ದಕ್ಕೆ ಆಕೆಯನ್ನ ಪತಿ ಕೊಲೆ ಮಾಡಿದ್ದಾನೆ. ಅಂಬ್ಲಿಗೊಳ್ಳ ಗ್ರಾಮದ ಗೌರಮ್ಮ (29) ಕೊಲೆಯಾದವರು. ಪತಿ ಮನೋಜ್ (30) ಕೊಲೆ ಆರೋಪಿ.
ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಗೌರಮ್ಮ ನಿನ್ನೆ ರಾತ್ರಿ ಮನೆಯಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಮನೆಗೆ ಬಂದ ಪತಿರಾಯ ಊಟ ಬಡಿಸುವಂತೆ ತಿಳಿಸಿದ್ದಾನೆ. ಫೋನ್‌ನಲ್ಲಿದ್ದೇನೆ, ನೀವೆ ಹಾಕಿಕೊಂಡು ಊಟ ಮಾಡಿ ಎಂದು ಗೌರಮ್ಮ ಉತ್ತರಿಸಿದ್ದಾಳೆ. ಇದೇ ವಿಚಾರಕ್ಕೆ ಜಗಳವಾಗಿ ಸಿಟ್ಟಿನ ಬರದಲ್ಲಿ ಪತಿ ಮನೋಜ್ ಆಕೆಯನ್ನ ಹೊಡೆದು ಟವಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.ಈ ಸಂಬಂಧ ಗೌರಮ್ಮನ ತಂದೆ ಗುತ್ಯಪ್ಪ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಾಲಕಿ ನೇಣಿಗೆ ಶರಣು
ಶಾಲೆಯಿಂದ ಮನೆಗೆ ಬಂದ ಬಾಲಕಿಯೊಬ್ಬಳು ನೇಣಿಗೆ ಶರಣಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಇಲ್ಲಿನ ಏರಿಯಾವೊಂದರ ನಿವಾಸಿಯಾಗಿದ್ದ ಬಾಲಕಿ ಮನೆಗೆ ಬಂದು ನೇಣಿಗೆ ಶರಣಾಗಿದ್ದಾಳೆ. ಘಟನೆಯನ್ನು ನೋಡಿದ ಬೆನ್ನಲ್ಲೆ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಷ್ಟರಲ್ಲಿ ಬಾಲಕಿ ಸಾವನ್ನಪ್ಪಿದ್ದಳು. ಘಟನೆಗೆ ಕಾರಣ ಇನ್ನಷ್ಟೆ ತಿಳಿದು ಬರಬೇಕಿದೆ. ಶಿವಮೊಗ್ಗ ನಗರದ ಸ್ಟೇಷನ್ ಒಂದರಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದಲ್ಲಿ ಮತ್ತೊಂದು ಸೈಬರ್ ವಂಚನೆ
ಶಿವಮೊಗ್ಗದ ಯುವತಿಯೊಬ್ಬಳಿಗೆ ಪ್ರತಿಷ್ಠಿತ ಕೊರಿಯರ್ ಸಂಸ್ಥೆಯ ಉದ್ಯೋಗಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಕರೆ ಮಾಡಿ 4 ಲಕ್ಷ ರೂ. ವಂಚಿಸಿದ್ದಾನೆ. ತಮ್ಮ ಹೆಸರಲ್ಲಿ ಮುಂಬೈನಿಂದ ಇರಾನ್‌ಗೆ ತಮ್ಮ ಹೆಸರಿನಲ್ಲಿ ಪಾರ್ಸಲ್ ಹೋಗುತ್ತಿದೆ. ಅದರಲ್ಲಿ ಡ್ರಗ್ಸ್ ಇದೆ ಹೆದರಿಸಿದ್ದಷ್ಟೆ ಅಲ್ಲದೆ ನಿಮ್ಮನ್ನು ಬಚಾವ್ ಮಾಡಲು ಹಣ ನೀಡಬೇಕು ಎಂದು ಹೇಳಿ ಹಣ ವರ್ಗಾಯಿಸಿಕೊಂಡಿದ್ದಾರೆ. ಸದ್ಯ ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
SUMMARY | shivamogga short news
KEYWORDS | shivamogga short news