SHIVAMOGGA | MALENADUTODAY NEWS | ಮಲೆನಾಡು ಟುಡೆ Feb 6, 2025
ಶಿವಮೊಗ್ಗದ ಶರಾವತಿ ನಗರದಲ್ಲಿ ವಯಕ್ತಿಕ ವಿಚಾರಕ್ಕೆ ಓರ್ವನಿಗೆ ಚಾಕುವಿನಿಂದ ಇರಿಯಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶರಾವತಿ ನಗರದ ಪಾಂಡುರಂಗ ದೇವಾಲಯದ ಸಮೀಪ ಘಟನೆ ನಡೆದಿದೆ. ಇವತ್ತು ಮಧ್ಯಾಹ್ನ 12.50 ರ ಸುಮಾರಿಗೆ ಘಟನೆ ನಡೆದಿದೆ. ಘಟನೆಯಲ್ಲಿ ಚಾಕುವಿನಿಂದ ಇರಿತಕ್ಕೆ ಒಳಗಾದವನನ್ನು ಬಸ್ ಡ್ರೈವರ್ ರವಿ ಎನ್ನಲಾಗುತ್ತಿದೆ. ತೀವ್ರವಾಗಿ ಗಾಯಗೊಂಡಿರುವ ಈತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಆ ಬಳಿಕ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಚಿಕಿತ್ಸೆ ನೀಡಲಾಗುತ್ತಿದೆ.
ನಡೆದಿದ್ದೇನು
ರವಿ ಕುಟುಂಬಸ್ಥರೊಬ್ಬರಿಗೆ ಅಡುಗೆ ಕೆಲಸ ಮಾಡಿಕೊಂಡಿರುವ ಅರುಣ್ ಎಂಬಾತ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ. ಇಬ್ಬರು ಪರಿಚಯಸ್ಥರೇ ಆಗಿದ್ದರಿಂದ ಈ ಬಗ್ಗೆ ಮಾತನಾಡೋದಕ್ಕೆ ರವಿ ಅರುಣ್‌ನನ್ನ ಭೇಟಿ ಮಾಡುವಂತೆ ತಿಳಿಸಿದ್ದ. ಶರಾವತಿ ನಗರದ ದೇವಸ್ಥಾನದ ಬಳಿಯಲ್ಲಿ ಇಬ್ಬರು ಭೇಟಿಯಾಗಿದ್ದಾರೆ. ಈ ವೇಳೆ ಕೈಯಲ್ಲಿ ಖಾರದ ಪುಡಿಯ ಕವರ್ ಹಿಡಿದು ಬಂದಿದ್ದ ಅರುಣ್ , ರವಿಯ ಜೊತೆಗೆ ಮಾತನಾಡಲು ಆರಂಭಿಸಿದ್ದಾನೆ. ಮಾತುಕತೆ ವಿಕೋಪಕ್ಕೆ ಹೋದ ವೇಳೆಯಲ್ಲಿ ಅರುಣ್ ಕೈಯಲ್ಲಿದ್ದ ಖಾರದ ಪುಡಿಯನ್ನು ರವಿ ಮುಖಕ್ಕೆ ಎರಚಿ, ಸ್ವಲ್ಪ ದೂರದಲ್ಲಿಟ್ಟಿದ್ದ ಚಾಕುವನ್ನು ತಂದು ರವಿಗೆ ಚುಚ್ಚಿ ಹಲ್ಲೆ ಮಾಡಿದ್ದಾನೆ.
View this post on Instagram
SUMMARY | A young man was stabbed in Sharavathi Nagar, in jurisdiction of Doddapet police station.
KEY WORDS | young man was stabbed in Sharavathi Nagara, Doddapete police station.