SHIVAMOGGA | MALENADUTODAY NEWS | ಮಲೆನಾಡು ಟುಡೆ Nov 20, 2024
ಚಿತ್ರ ನಿರ್ಮಾಣದ ಮಾತುಕತೆ ವೇಳೆಯಲ್ಲಿ ನಿರ್ದೇಶಕರೊಬ್ಬರ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಆರೋಪದ ಅಡಿಯಲ್ಲಿ ನಟ ತಾಂಡವೇಶ್ವರ ವಿರುದ್ಧ ಬೆಂಗಳೂರು ಚಂದ್ರಾ ಲೇಔಟ್ ಠಾಣೆ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಅಲ್ಲದೆ ಈ ಸಂಬಂಧ ಚಿತ್ರನಟನನ್ನ ಬಂಧಿಸಲಾಗಿದೆ. ಧಾರವಾಹಿಗಳಲ್ಲಿ ನಟಿಸಿದ್ದ ತಾಂಡವೇಶ್ವರ್ ದೇವನಾಂಪ್ರಿಯ ಎಂಬ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದರು. ಈ ವಿಚಾರದಲ್ಲಿ ನಿರ್ದೇಶಕ ಭರತ್ ನಾವುಂದರ ಜೊತೆ ಕೆಲಸ ಆರಂಭಿಸಿದ್ದರು. ಆದರೆ ಎರಡು ವರ್ಷ ಕಳೆದರೂ ಚಿತ್ರ ಪೂರ್ಣಗೊಂಡಿಲ್ಲ. ಈ ನಡುವೆ ತಾಂಡವೇಶ್ವರ್ ನಿರ್ದೇಶಕರ ಬಳಿ ತಾವು ಚಿತ್ರ ನಿರ್ಮಾಣಕ್ಕೆ ನೀಡಿದ್ದ ಹಣವನ್ನ ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ.
ಇದೇ ವಿಚಾರಕ್ಕೆ ನಿರ್ಮಾಪಕರ ಕಚೇರಿಯಲ್ಲಿ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ತಾಂಡವೇಶ್ವರ್ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 109 ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಕಲಂ 3, 27, 30ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ
SUMMARY | Kannada television actor Tandaveshwar has been arrested for allegedly shooting film director Bharat Navunda over a financial dispute
KEY WORDS |Kannada , television actor Tandaveshwar has been arrested , film director Bharat Navunda, financial dispute