SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 11, 2024 | SHIVAMOGGA NEWS | ಶಿವಮೊಗ್ಗ ಜಿಲ್ಲೆಯ ಎಲ್ಲೆಡೆ ನಾಡಹಬ್ಬ ದಸರಾದ ಅಂಗವಾಗಿ ಆಯುಧಪೂಜೆ ನಡೆಯುತ್ತಿದೆ. ಇನ್ನು ನಾಳೆ ಶಿವಮೊಗ್ಗದಲ್ಲಿ ದಸರಾ ಜಂಬೂಸವಾರಿ ನಡೆಯಲಿದೆ.
ನಾಳೆ ದಿನ ಚಾಮುಂಡೇಶ್ವರಿ ಅಂಬಾರಿ ಮೆರವಣಿಗೆ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿದೆ.
ಸಕ್ರೆಬೈಲ್ ಬಿಡಾರದ ಆನೆ ಸಾಗರ್ ಅಂಬಾರಿ ಹೊತ್ತು ಸಾಗಲಿದ್ದಾನೆ. ಬೆಳ್ಳಿ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ವೈಭವದ ಅಂಬಾರಿ ಮೆರವಣಿಗೆ ನಡೆಯಲಿದೆ.
ಮಂಗಳವಾರ ಮಧ್ಯಾಹ್ನ 2.30ಕ್ಕೆ ಕೋಟೆ ರಸ್ತೆಯ ಶಿವಪ್ಪನಾಯಕ ಅರಮನೆ ಆವರಣದಿಂದ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಅಮ್ಮನವರ ಅಂಬಾರಿ ಮೆರವಣಿಗೆಯು ಶಿವಮೊಗ್ಗದ ಹಲವು ದೇವಾನು ದೇವತೆಗಳೊಂದಿಗೆ ಆರಂಭವಾಗಲಿದೆ.

ನಗರದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆಯು ಫ್ರೀಡಂ ಪಾರ್ಕ್ ಅಲ್ಲಮಪ್ರಭು ಮೈದಾನ ತಲುಪಲಿದೆ.
ಮೆರವಣಿಗೆಯಲ್ಲಿ ಮಂಗಳವಾದ್ಯ, ನಂದಿಧ್ವಜ ಕುಣಿತ, ವೀರಗಾಸೆ, ಚಂಡೆ-ಮದ್ದಳೆ, ಯಕ್ಷಗಾನ, ನಗಿಸುವ ಗೊಂಬೆಗಳು, ರಾಜ್ಯ ಪ್ರಶಸ್ತಿ ವಿಜೇತ ಶೆಟ್ಟಿ ಗೊಂಬೆ ಬಳಗದಿಂದ ದೊಡ್ಡ ಗೊಂಬೆಗಳ ಕುಣಿತ ಕೀಲು ಕುದುರೆ ನೃತ್ಯ, ಕುಂಡ ಹೊತ್ತ ಮಹಿಳೆ ಕುಣಿತ, ಮಹಿಳಾ ಡೊಳ್ಳು ಕುಣಿತ, ಹುಲಿವೇಷ, ರೋಡ್ ಆರ್ಕೆಸ್ಟ್ರಾ ಹಾಗೂ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಂಜೆ 5 ಗಂಟೆಗೆ ಪ್ರೀಡಂ ಪಾರ್ಕ್‌ನಲ್ಲಿ ಖ್ಯಾತ ಗಾಯಕಿ ಸುರೇಖಾ ಹೆಗಡೆ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಲಿದೆ.
ಸಂಜೆ 6.30ಕ್ಕೆ ತಹಸೀಲ್ದಾರ್‌ಬಿ. ಎನ್. ಗಿರೀಶ್ ಅವರು ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಬನ್ನಿ ಮುಡಿದ ನಂತರ ಪಟಾಕಿ, ಸಿಡಿಮದ್ದು ಪ್ರದರ್ಶನ ಜೊತೆಗೆ ರಾವಣ ದಹನ ಕಾರ್ಯಕ್ರಮ ನಡೆಯಲಿದೆ.
ಶಾಸಕ SN ಚನ್ನಬಸಪ್ಪ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಜಿ. ಕೆ.ಮಿಥುನ್‌ಕುಮಾರ್, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಹಾನ್ ಆದಿತ್ಯ ಬಿಸ್ವಾಸ್ ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
SUMMARY | Ayudha Pooja is being performed all over Shivamogga district as part of Dasara. Dasara Jumboo Savari will be held in Shivamogga tomorrow.
KEYWORDS | Ayudha Pooja , Shivamogga district Dasara, Dasara Jumboo Savari, Shivamogga tomorrow