SHIVAMOGGA | MALENADUTODAY NEWS | ಮಲೆನಾಡು ಟುಡೆ Nov 13, 2024
ಮೆಸ್ಕಾಂ ತುರ್ತು ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಹಳೆ ಶಿವಮೊಗ್ಗ ಸೇರಿದಂತೆ ಹಲವು ಏರಿಯಾಗಳಲ್ಲಿ ನಾಳೆ ಅಂದರೆ ನವೆಂಬರ್ 14 ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ನಾಳೆ ವಿದ್ಯುತ್ ಸ್ಥಗಿತ
ನವೆಂಬರ್14 ರಂದು ಬೆಳಗ್ಗೆ 10ರಿಂದ ಸಂಜೆ 6 ರವರೆಗೆ ಆರ್. ಎಂ.ಎಲ್. ನಗರ, ಮಂಡ್ಲಿ ವೃತ್ತ, ಬೈಪಾಸ್, ಎನ್.ಟಿ. ರಸ್ತೆ, ಮಾರನವಮಿಬೈಲು, ಜೆ.ಸಿ. ನಗರ, ಭಾರತಿ ಕಾಲೋನಿ, ಪಂಚವಟಿ ಕಾಲೋನಿ, ಬಿ.ಎಚ್. ರಸ್ತೆ, ಪಿಯರ್‌ಲೈಟ್ ಫ್ಯಾಕ್ಟರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ ಎಂದು ಮೆಸ್ಕಾಂ ಎಂಜಿನಿಯರ್ ತಿಳಿಸಿದ್ದಾರೆ.
ನ.14 ರಂದು ವಿದ್ಯುತ್ ವ್ಯತ್ಯಯ
ಶಿವಮೊಗ್ಗ ನಗರ ಎಲೆರೇವಣ್ಣ ಕೇರಿ ರಸ್ತೆಯಲ್ಲಿ ಕಂಬಗಳನ್ನು ಬದಲಿಸುವ ಕಾಮಗಾರಿ ಇರುವುದರಿಂದ ನ.14 ರಂದು ಬೆಳಗ್ಗೆ 09.00 ರಿಂದ ಸಂಜೆ 6.00ರವರೆಗೆ ಗಾಂಧಿಬಜಾರ್, ಎಲೆರೇವಣ್ಣಕೇರಿ, ನಾಗಪ್ಪಕೇರಿ, ಅಶೋಕ ರಸ್ತೆ, ತುಳುಜಾ ಭವಾನಿ ರಸ್ತೆ, ಅನವೇರಪ್ಪ ಕೇರಿ, ಹಾವಿನಕೇರಿ, ಲಷ್ಕರ್ ಮೊಹಲ್ಲಾ, ಮೀನುಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
———
SUMMARY | RML nagara, Mandli Circle, Bypass, N.T. Road, Maranavamibailu, J.C. Nagar, Bharati Colony, Panchavati Colony, B.H. Road, Pier Light Factory, Power Cut, MESCOM Shivamogga
KEYWORDS | RML nagara , Mandli Circle, Bypass, N.T. Road, Maranavamibailu, J.C. Nagar, Bharati Colony, Panchavati Colony, B.H. Road, Pier Light Factory, Power Cut, MESCOM Shivamogga