SHIVAMOGGA | MALENADUTODAY NEWS | ಮಲೆನಾಡು ಟುಡೆ Oct 24, 2024
ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ತಮ್ಮ ಮನೆಯವರು ತನ್ನನ್ನ ನೋಡಿಕೊಳ್ಳುತ್ತಿಲ್ಲ ಎಂದು ಪೊಲೀಸರಿಗೆ ದೂರು ಹೇಳಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ 112ಗೆ ಕರೆ ಮಾಡಿದ ವ್ಯಕ್ತಿಯೊಬ್ಬರು ತಮ್ಮ ಮಕ್ಕಳು ಸರಿಯಾಗಿ ನೋಡಿಕೊಳ್ತಿಲ್ಲ ಎಂದು ದೂರಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ದೂರುದಾರರ ಮಕ್ಕಳಿಗೆ ಬುದ್ದಿ ಹೇಳಿ ಎಚ್ಚರಿಸಿ ಚೆನ್ನಾಗಿ ನೋಡಿಕೊಳ್ಳುವಂತೆ ಸೂಚಿಸಿದ್ದಾರೆ.
ಮದ್ಯರಾತ್ರಿ ಹೊರಗೆ ಹೋದವನನ್ನ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಗಸ್ತು ತಿರುಗಿ ಪತ್ತೆಮಾಡಿದ್ದಾರೆ. ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ಥಳೀಯರೊಬ್ಬರು ಕರೆ ಮಾಡಿ ತಮ್ಮ ತಮ್ಮ ಮನೆಯಿಂದ ಹೋದವನು ವಾಪಸ್ ಬಂದಿಲ್ಲ ಎಂದಿದ್ದಾರೆ. ವಿಷಯದ ಪೂರ್ಣ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಕರೆಮಾಡಿದವರ ಜೊತೆಗೆ ಸುತ್ತಮುತ್ತಲು ಗಸ್ತು ತಿರುಗಿದ್ದಾರೆ. ಈ ವೇಳೆ ಮನೆಯಿಂದ ಹೋಗಿದ್ದ ವ್ಯಕ್ತಿ ಪತೆಯಾಗಿದ್ದು, ಆತನನ್ನ ವಿಚಾರಣೆ ಮಾಡಿ ಮನೆಗೆ ತಲುಪಿಸಿದ್ದಾರೆ.
SUMMARY | Shivamogga Vinobhanagar Police Station, Bhadravathi Rural Police Station, 112 ERV personnel
KEYWORDS | Shivamogga Vinobhanagar Police Station, Bhadravathi Rural Police Station, 112 ERV personnel