SHIVAMOGGA | MALENADUTODAY NEWS | ಮಲೆನಾಡು ಟುಡೆ Nov 12, 2024
ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ಚುರುಕುಗೊಂಡಿರುವುದಕ್ಕೆ ಮತ್ತೊಂದಿಷ್ಟು ಸಾಕ್ಷ್ಯ ಸಿಕ್ಕಿದೆ. ಪೂರಕವಾಗಿ ಕೊಪ್ಪ ತಾಲೂಕಿನಲ್ಲಿ ಮೂರು ಬಂದೂಕುಗಳು ಪತ್ತೆಯಾಗಿವೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಇಲ್ಲಿಗೆ ನಕ್ಸಲ್ ನಾಯಕಿ ಮುಂಡಗಾರು ಲತಾ ಭೇಟಿ ನೀಡಿರುವ ಶಂಕೆ ವ್ಯಕ್ತವಾಗಿದೆ.
ಕಾರ್ಕಳ ಸಮೀಪ ನಕ್ಸಲ್ರ ತಂಡ ಕಾಣಿಸಿಕೊಂಡಿತ್ತು ಎಂದ ಬೆನ್ನಲ್ಲೆ ಶೃಂಗೇರಿಯಲ್ಲಿ ನಕ್ಸಲ್ ಓಡಾಟದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ Chikkamgaluru ಪೊಲೀಸರು ಹಾಗೂ ANF ಸಿಬ್ಬಂದಿ ಕೂಂಬಿಂಗ್ ನಡೆಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಕೊಪ್ಪ ತಾಲ್ಲೂಕು ಕಡೆಗುಂಡಿ ಗ್ರಾಮದ ನಿವಾಸಿಯೊಬ್ಬರ ಮನೆಯಲ್ಲಿ ಮೂರು ಬಂದೂಕು ಪತ್ತೆಯಾಗಿದೆ. ಈ ಮನೆಗೆ ನಕ್ಸಲರ ತಂಡ ಭೇಟಿಕೊಟ್ಟಿರುವ ಅನುಮಾನ ಮೂಡಿಸಿದೆ.
ಜಯಪುರ ಪೊಲೀಸ್ ಠಾಣೆಯಲ್ಲಿ ಬಂದೂಕ್ತು ಜಪ್ತಿಯ ಕೇಸ್ ದಾಖಲಾಗಿದೆ. ಮುಂದುವರಿದು ನಕ್ಸಲ್ ಓಡಾಟದ ಸಂಬಂಧ ಇಬ್ಬರು ವ್ಯಕ್ತಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

SUMMARY | Police have seized three firearms allegedly belonging to Naxals in Koppa taluk of Chikkamagaluru district
KEYWORDS | Police have seized three firearms , Naxals in Koppa taluk , Chikkamagaluru district,