SHIVAMOGGA | MALENADUTODAY NEWS Oct 31, 2024
ದೊಡ್ಡಹಬ್ಬಕ್ಕೆ ಮಲೆನಾಡು ಸಜ್ಜಾಗಿದೆ.ನಿನ್ನೆ ರಾತ್ರಿಯೇ ಪದ್ದತಿಯಂತೆ ನೀರು ತುಂಬು ಆಚರಣೆ ಕೈಗೊಳ್ಳಲಾಗಿದೆ. ಇನ್ನೂ ಹಬ್ಬದ ಹಿನ್ನೆಲೆಯಲ್ಲಿ ಖರೀದಿಯು ಜೋರಾಗಿ ನಡೆದಿದೆ.ʼ
ಶಿವಮೊಗ್ಗ ನಗರದ ಗಾಂಧಿಬಜಾರ್ನಲ್ಲಿ ನಿನ್ನೆ ದಿನ ಕಾಲಿಡಲು ಸಹ ಜಾಗವಿಲ್ಲ ಎಂದು ಮಾತನಾಡುವಷ್ಟು ರಶ್ ನಿರ್ಮಾಣವಾಗಿತ್ತು. ಹೂವು, ಹಣ್ಣು, ಹಣತೆಗಳನ್ನ ಖರೀದಿಸುತ್ತಿದ್ದ ಜನರು, ಅಂಗಡಿಪೂಜೆಗೆ ಬೇಕಾದ ಸಾಮಗ್ರಿಗಳನ್ನ ಕೊಂಡುಕೊಳ್ಳುವ ಗಡಿಬಿಡಿಯಲ್ಲಿದ್ದರು.
ಗಾಂಧಿ ಬಜಾರ್ ನಗರದ ಪ್ರಮುಖ ಮಾರುಕಟ್ಟೆಯಾಗಿದ್ದರೇ, ಇತ್ತ ಗೋಪಿ ಸರ್ಕಲ್, ಪೊಲೀಸ್ ಚೌಕಿ, ಲಕ್ಷ್ಮೀ ಟಾಕೀಸ್ ಸರ್ಕಲ್ಗಳಲ್ಲಿಯು ಹಬ್ಬದ ವ್ಯಾಪಾರ ನಡೆದಿತ್ತು.
ಒಟ್ಟಾರೆ ಲಕ್ಷ್ಮೀ ಪೂಜೆಗಾಗಿ ಮಂದಿ ಖರೀದಿಯಲ್ಲಿ ತೊಡಗಿದ್ದು, ರೇಟು ಸ್ವಲ್ಪ ದುಬಾರಿಯಾಗಿದೆ. ಹಬ್ಬಕ್ಕೆ ಮಾರುಕಟ್ಟೆಗೆ ಬಂದ ಹೂವು ಹಣ್ಣುಗಳ ದರಗಳನ್ನ ಗಮನಿಸುವುದಾದರೆ ಅದರ ವಿವರ ಹೀಗಿದೆ.

ದಾಳಿಂಬೆ ₹200 (ಕೆಜಿ)
ಸೇಬು ₹250
ಮೋಸಂಬಿ ₹150
ಕಿತ್ತಳೆ ಹಣ್ಣು ₹180
ಸೀತಾಫಲ ₹200
ಬಾಳೆ ಹಣ್ಣು ₹100
ಪೈನಾಪಲ್ಗೆ ₹80ರಿಂದ ₹100 (ಒಂದಕ್ಕೆ)
ಬೂದುಗುಂಬಳಕಾಯಿ ₹40ರಿಂದ ₹50 (ಒಂದಕ್ಕೆ)
ಕೆ.ಜಿ. ಚಂಡು ಹೂ ₹100
ಒಂದು ಮಾರು ಸೇವಂತಿ ₹100,
ಮಾರು ಮಲ್ಲಿಗೆ ಹೂವು ₹100
ಒಂದು ಹಾರದ ದರ ₹150ರಿಂದ ₹400
ಬಾಳೆ ದಿಂಡು ₹50
ಮಾವಿನ ಸೊಪ್ಪಿಗೆ ₹20
ಹಣತೆ ₹50 ರಿಂದ ₹60 (ಒಂದು ಡಜನ್),
SUMMARY | Flowers, fruits Rate in the market ahead of Diwali festival, apple, mosambi, orange, sitafal, banana, pineapple, ashgourd, chandu flower, sevanthi, jasmine flower, banana stalk, Mango leaves, money,
KEYWORDS | Flowers, fruits Rates in the market , Dipavali festival happy dipavali
, apple, mosambi, orange, sitafal, banana, pineapple, ashgourd, chandu flower, sevanthi, jasmine flower, banana stalk, Mango leaves, money,