SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 16, 2025
ಶಿವಮೊಗ್ಗ | ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ದಿನಪತ್ರಿಕೆ, ಕರ್ನಾಟಕ ರಾಜ್ಯ ಪಾರಂಪರಿಕ ವೈದ್ಯ ಪರಿಷತ್, ಟಿಎಂಎಇಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಹಾಗೂ ಜಿಲ್ಲಾ ಆಯುಷ್ ಇಲಾಖೆ ಸಹಯೋಗದೊಂದಿಗೆ ಜನವರಿ 18 ರಂದು ನಗರದ ಸರ್ಕಾರಿ ನೌಕರರ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗು ಔಷಧಿ ವಿತರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ರಾಮಚಂದ್ರ ಗುಣಾರಿ ತಿಳಿಸಿದರು.
ಇಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಪಾರಂಪರಿಕ ವೈದ್ಯರು, ಆಯುರ್ವೇದ ವೈದ್ಯರು, ಹೋಮಿಯೋಪತಿ ವೈದ್ಯರು ಹಾಗೂ ಯುನಾನಿ ವೈದ್ಯರು ತಪಾಸಣೆ ನಡೆಸಲಿದ್ದಾರೆ. ರಾಜ್ಯದ ಹಲವಾರು ಭಾಗಗಳಿಂದ 15ಕ್ಕೂ ಹೆಚ್ಚು ಪಾರಂಪರಿಕ ವೈದ್ಯರು ಆಗಮಿಸಲಿದ್ದಾರೆ. ವೈದ್ಯರು ಮೂಳೆ, ಕೀಲು, ಚರ್ಮದ ವ್ಯಾದಿ, ಶುಗರ್, ಬಿಪಿ, ಕಿಡ್ನಿಯಲ್ಲಿ ಕಲ್ಲು, ಗ್ಯಾಂಗ್ರಿನ್, ಅಲ್ಸರ್, ಥೈರಾಯ್ಡ್ ಬೊಜ್ಜು, ಪ್ರಸೂತಿ ಹಾಗೂ ಸ್ತ್ರೀ ಸಂಬಂಧಿತ ಸಮಸ್ಯೆ ನರೋಳಿಗಳಿಗೆ ಹಾಗೂ ಇನ್ನಿತರೆ ರೋಗಗಳಿಗೆ ತಪಾಸಣೆ ನಡೆಸಿ ಔಷಧಿ ನೀಡಲಿದ್ದಾರೆ ಎಂದರು.
ಕಾರ್ಯಕ್ರಮವನ್ನು ವಿಧಾನ ಪರಿಷತ್ ಮಾಜಿ ಸಭಾಪತಿಗಳಾದ ಡಿ.ಹೆಚ್. ಶಂಕರಮೂರ್ತಿ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಗರದ ವಿಧಾನಸಭಾ ಸದಸ್ಯರಾದ ಚನ್ನಬಸಪ್ಪನವರು, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ಅವರು, ಡಾಕ್ಟರ್ ಧನಂಜಯ ಸರ್ಜಿ ಅವರು, ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಸ್. ಸುಂದರೇಶ್ ಅವರು ಹಾಗೂ ಆಯುಷ್ ಇಲಾಖೆ ಅಧಿಕಾರಿಗಳು ಆಗಮಿಸಲಿದ್ದಾರೆ ಎಂದರು.
SUMMARY | A free health check-up camp and distribution of medicines will be organised on January 18 at 10 am at the Government Employees’ Bhavan in the city, Gunari said.
KEYWORDS | health checkup, distribution of medicines, January 18, Government Employees’ Bhavan,