SHIVAMOGGA | MALENADUTODAY NEWS | ಮಲೆನಾಡು ಟುಡೆ Nov 13, 2024
ಶಿವಮೊಗ್ಗ | ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ತೀವ್ರ ಕುತೂಹಲ ಮೂಡಿಸುತ್ತಿದೆ. ಪ್ರತಿಷ್ಟೆಯ ಮೇಲಾಟಗಳ ನಡುವೆ ಶಿವಮೊಗ್ಗ ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ನಿರ್ದೇಶಕರ ಚುನಾವಣೆ 38 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಅವರೆಲ್ಲರು ರಾಜ್ಯ ಸರ್ಕಾರಿ ನೌಕರರ ಸಂಘದ ಹಾಲಿ ಅಧ್ಯಕ್ಷ ಸಿಎಸ್ ಷಡಾಕ್ಷರಿ ಬಣದವರು ಎನ್ನಲಾಗಿತ್ತು. ಇದೀಗ ಮಹತ್ವದ ಬೆಳವಣಿಗೆಯಲ್ಲಿ ಈ ಗುಂಪಿನಲ್ಲಿ ಕಾಣಿಸಿಕೊಂಡಿದ್ದ ಮೋಹನ್ ಕುಮಾರ್ ಇದೀಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ ಪಾಳಯದಲ್ಲಿ ಕಾಣಿಸಿಕೊಂಡಿದ್ದಾರೆ.
ಹೌದು, ಇಂದು ಬೆಂಗಳೂರಿನಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್. ಮಧು ಬಂಗಾರಪ್ಪರವನ್ನ ಅವರ ಗೃಹ ಕಚೇರಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸರ್ಕಾರಿ ನೌಕರರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಹಾಗೂ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳಾದ ಆರ್. ಮೋಹನ್ ಕುಮಾರ್, ಜಿ. ಹೆಚ್ ಸತ್ಯನಾರಾಯಣ, ಹನುಮ ನಾಯ್ಕ, ರಘುರಾಮ್ ದೇವಾಡಿಗ ರವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಚುನಾವಣೆ ನಿಕ್ಕಿಯಾಗಿರುವ ಸ್ಥಾನಗಳಲ್ಲಿ ಒಗ್ಗಟ್ಟಿನಿಂದ ಚುನಾವಣೆ ನಡೆಸಿ ಪರಸ್ಪರ ಸಹಕಾರದಿಂದ ತಂಡದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಧು ಬಂಗಾರಪ್ಪರವರು ಸದಸ್ಯರಿಗೆ ಸೂಚಿಸಿದರು. ಒಟ್ಟಾರೆ 66 ಸ್ಥಾನಗಳ ಪೈಕಿ 38 ಸ್ಥಾನದಲ್ಲಿ ಅವಿರೋಧ ಆಯ್ಕೆಯಾಗಿದ್ದು, 28 ಕ್ಷೇತ್ರಗಳ ಚುನಾವಣೆ ನಡೆಯಬೇಕಿದೆ. ಈ ನಡುವೆ ಸಚಿವರ ಕಾರ್ಯತಂತ್ರ ಕುತೂಹಲ ಮೂಡಿಸಿದೆ.
SUMMARY |State Government Employees Association, Elections, State President C.S. Shadakshari, In-charge Minister Madhu Bangarappa, Shivamogga, Shimoga State Government Employees Association’s Shimoga District Branch Directors Election,
KEYWORDS | State Government Employees Association, Elections, State President C.S. Shadakshari, In-charge Minister Madhu Bangarappa, Shivamogga, Shimoga State Government Employees Association’s Shimoga District Branch Directors Election,