ದಿನಕ್ಕೆ 2% ಲಾಭದ ಆಸೆ, ₹5 ಲಕ್ಷದ ನಾಮ | MP ಬರದಿದ್ದರೆ ತಾಳಿ ಕಟ್ಟಲ್ಲವೆಂದ ಮಧು ಮಗ | ಆಟೋ KSRTC ಡಿಕ್ಕಿ | OUT OF STATION

13

 SHIVAMOGGA | MALENADUTODAY NEWS | ಮಲೆನಾಡು ಟುಡೆ  Mar 3, 2025 ‌‌  

 ಸುದ್ದಿ  1  : ಷೇರು ನಂಬಿ 5 ಲಕ್ಷ ಖೋತಾ | ಹಾವೇರಿಯಲ್ಲಿ ಷೇರು ಒಂದಕ್ಕೆ ಇನ್‌ವೆಸ್ಟ್‌ ಮಾಡಿದರೆ, ಪ್ರತಿದಿನ ಎರಡು ಪರ್ಸೆಂಟ್‌ ಹೆಚ್ಚಿಗೆ ಲಾಭ ನಿಡುವುದಾಗಿ ಆಮಿಷ ಒಡ್ಡಿ ವ್ಯಕ್ತಿಯೊಬ್ಬರಿಂದ ಐದು ಲಕ್ಷದ 83 ಸಾವಿರ ರೂಪಾಯಿ ಹಣವನ್ನು ತಮ್ಮ ಖಾತೆಗೆ ಹಾಕಿಸಿಕೊಂಡು ವಂಚಿಸಿದವರನ್ನ ಪೊಲೀಸರು ಬಂಧಿಸಿದ್ದಾರೆ. ಚಂದ್ರಪ್ಪ ಶಿವಪ್ಪ ತೋಟದ ಬಂಧಿತ ಆರೋಪಿ. ಈ ಸಂಬಂಧ ಇಲ್ಲಿನ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಕಂಪ್ಲೆಂಟ್‌ ದಾಖಲಾಗಿತ್ತು. ಈ ರೀತಿಯಲ್ಲಿ ಷೇರು ವಿಚಾರದಲ್ಲಿ ಅತಿಹೆಚ್ಚು ಲಾಭಾಂಶ ನೀಡುವ ಸ್ಕೀಂಗಳನ್ನು ನಂಬಬೇಡಿ ಎಂಧು ಪೊಲೀಸ್‌ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

 Malenadu Today

 

ಸುದ್ದಿ 2 : ಆಟೋ ಕೆಎಸ್‌ಆರ್‌ಟಿಸಿ ಬಸ್‌ ನಡುವೆ ಡಿಕ್ಕಿ | ಅತ್ತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಕೆಎಸ್‌ ಆರ್‌ಟಿಸಿ ಬಸ್‌ ಹಾಗೂ ಆಟೋ ನಡುವೆ ಪುತ್ತೂರು ಕಡೆಯಿಂದ ಬರುತ್ತಿದ್ದ ಆಟೋ ರಿಕ್ಷಾದ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಆಟೋದಲ್ಲಿದ್ದ ಇಬ್ಬರು ಮೃತಪಟ್ಟಿದ್ದು ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆ ಬೆಚ್ಚಿ ಬೀಳಿಸುತ್ತಿದೆ. 

 

Malenadu Today

 

ಸುದ್ದಿ  3: MP ಬರುವರೆಗೂ ತಾಳಿ ಕಟ್ಟಲ್ಲ ಎಂದು ಮಧು ಮಗ | ಇಂತಹದ್ದೊಂದು ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಕಾಂಗ್ರೆಸ್‌ ಕಾರ್ಯಕರ್ತನೊಬ್ಬ ತನ್ನ ಮದುವೆಯಾಗಿ ದಾವಣಗೆರೆ ಸಂಸದೆ  ಡಾ ಪ್ರಭಾ ಮಲ್ಲಿಕಾರ್ಜುನ್ ರವರು ಬರಲೇಬೇಕು ಅವರು ಬರಲ್ಲವೆಂದರೆ, ತಾಳಿಯನ್ನೆ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದ. ಈ ಹಿನ್ನೆಲೆಯಲ್ಲಿ  ಸಂಸದರ ಗೃಹಕಚೇರಿಗೆ ಬಂದಿದ್ದ ಸಂದೀಪ್ ವಿವಾಹ ಮಹೋತ್ಸವಕ್ಕೆ ಆಗಮಿಸುವಂತೆ ಆಹ್ವಾನ ಪತ್ರಿಕೆ ನೀಡಿ, ಸಂಸದರು ಬರದಿದ್ದರೆ ವಧುವಿಗೆ ತಾಳಿಯನ್ನೇ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದ. ಈ ವಿಚಾರ ಕೇಳಿ ತಿಳಿಸಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್‌  ಚೆನ್ನಗಿರಿಗೆ ತೆರಳುತ್ತಿದ್ದ ವೇಳೆ , ಕಾರ್ಯಕರ್ತನ ಮನೆಗೆ ಭೇಟಿ ನೀಡಿ, ಮದುವೆಗೆ ಬರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮುನ್ನೆವೆ ಬಂದು ಶುಭ ಕೋರುತ್ತಿದ್ದೇನೆ ಎಂದು ಉಡುಗೊರೆ ಕೊಟ್ಟು ಆತನನಿಗೆ ಶುಭ ಹಾರೈಸಿದ್ದಾರೆ. 

 

Malenadu Today

Share This Article