SHIVAMOGGA | MALENADUTODAY NEWS | ಮಲೆನಾಡು ಟುಡೆ Jan 24, 2025
ಅಪ್ರಾಪ್ತ ಮೇಲೆ ಅತ್ಯಾಚಾರ ಎಸಗಿದ್ದವಗೆ ದಾವಣಗೆರೆ ಕೋರ್ಟ್ 21 ವರ್ಷ ಜೈಲು ಶಿಕ್ಷೆ ವಿಧಿಸಿದೆ ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯ ಈ ತೀರ್ಪು ನೀಡಿದೆ. ಆರೋಪಿಗೆ ಒಟ್ಟಾರೆ 21 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿದೆ
ದಾವಣಗೆರೆ ಕೋರ್ಟ್
ಸಂತೋಷ್ ಶಿಕ್ಷೆಗೆ ಒಳಗಾದ ಆರೋಪಿ, 2021ರ ಮಾರ್ಚ್ 3 ರಂದು 15 ವರ್ಷದ ಅಪ್ರಾಪ್ರಯೊಬ್ಬರ ಮೇಲೆ ಸಂತೋಷ್ ಅತ್ಯಾಚಾರವೆಸಗಿದ್ದ. ಇದರಿಂದ ಆಕೆ ಗರ್ಭಿಣಿಯಾಗಿದ್ದರು.ದಾವಣಗೆರೆ ಜಿಲ್ಲೆ ತಾಲ್ಲೂಕು ಒಂದರಲ್ಲಿ ಕೇಸ್ ದಾಖಲಾಗಿತ್ತು. ಬಳಿಕ ತನಿಖೆ ನಡೆದು ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು ಇಲ್ಲಿನ ಪೊಲೀಸರು.
ಪ್ರಕರಣದ ವಿಚಾರಣೆ ನಡೆಸಿದ ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ತ ಎಫ್‌ಟಿಎಸ್ ಸಿ-1ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ಅವರು ಆರೋಪಿಗೆ 21 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 30 ಸಾವಿರ ರೂ.ದಂಡ ವಿಧಿಸಿದ್ದಾರೆ. ಇದೇ ವೇಳೆ ಆರೋಪಿಯ ನ್ಯಾಯಾಂಗ ಬಂಧನ ಅವಧಿಯನ್ನು ಪರಿಗಣಿಸಿ ಶಿಕ್ಷಾ ಅವಧಿ ಸೆಟ್ ಅಪ್ ಮಾಡಲಾಗಿದೆ.
SUMMARY | Davangere POCSO case, Accused sentenced to 21 years, Additional District and Dead FTS C-1 Court, Davangere
KEY WORDS | Davangere POCSO case, Accused sentenced to 21 years, Additional District and Dead FTS C-1 Court, Davangere