SHIVAMOGGA | MALENADUTODAY NEWS | ಮಲೆನಾಡು ಟುಡೆ Oct 20, 2024
ಆನಂದಪುರ | ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಸುಮೀಪ ಕಾರು ಬಸ್ ನಡುವೆ ಅಪಘಾತ ಸಂಭವಿಸಿದೆ. ಮೊನ್ನೆದಿನ ಈ ಘಟನೆ ನಡೆದಿದ್ದು ಇದೀಗ ಈ ಬಗ್ಗೆ ವರದಿಯಾಗಿದೆ.
ಇಲ್ಲಿನ ಹೆದ್ದಾರಿಯಲ್ಲಿ ಖಾಸಗಿ ಬಸ್ ಹಾಗೂ ಕಾರು ನಡುವೆ ಡಿಕ್ಕಿಯಾಗಿ ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಾಗರದಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಬಸ್ ಹಾಗೂ ಅಂದಾಸುರದಿಂದ ಸಾಗರ ಕಡೆಗೆ ಹೋಗುತ್ತಿದ್ದ ಕಾರಿನ ನಡುವೆ ಡಿಕ್ಕಿಯಾಗಿದ್ದು, ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದ್ದಾರೆ.
ಎದುರಿಗೆ ಬರುತ್ತಿದ್ದ ದನಕ್ಕೆ ಬಸ್ ಡಿಕ್ಕಿಯಾಗುವುದನ್ನ ತಪ್ಪಿಸುವ ಸಂದರ್ಭದಲ್ಲಿ ಕಾರು ಬಸ್ ನಡುವೆ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.


SUMMARY | The accident took place between a car and a bus at Anandapura in Sagar taluk of Shivamogga district.
KEYWORDS | accident took place between a car and a bus, Anandapura , Sagara taluk , Shivamogga district.