SHIVAMOGGA | MALENADUTODAY NEWS | ಮಲೆನಾಡು ಟುಡೆ Oct 22, 2024
ಶಿವಮೊಗ್ಗದಲ್ಲಿ ಮಳೆಹಾನಿಯ ಬಗ್ಗೆ ಇನ್ನಷ್ಟು ವರದಿಯಾಗುತ್ತಲೇ ಇದೆ. ಮೊನ್ನೆಯಿಂದ ಸುರಿಯುತ್ತಿರುವ ಮಳೆಗೆ ಶಿವಮೊಗ್ಗದ ಹೊಳೆಹೊನ್ನೂರು ಬಳಿಯ ಅರಹತೊಳಲು ಗ್ರಾಮದಲ್ಲಿ ಕೋಳಿ ಫಾರಂಗೆ ನೀರು ನುಗ್ಗಿ ಅಪಾರ ಹಾನಿ ಉಂಟಾಗಿದೆ. ಗೊಂದಿನಾಲೆಯ ಹೆಚ್ಚುವರಿ ನೀರು ಕೋಳಿ ಫಾರಂಗೆ ನುಗ್ಗಿದ ಪರಿಣಾಮ ಈ ಘಟನೆ ಸಂಭವಿಸಿದೆ. ಮಹೇಶ್ ಅವರಿಗೆ ಸೇರಿದ ಕೋಳಿ ಫಾರಂನಲ್ಲಿದ್ದ ಸುಮಾರು 3500 ಕೋಳಿಗಳು ಮೃತಪಟ್ಟಿವೆ.
ದಿಢೀರ್ ನೆರೆಯಿಂದ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಇತ್ತ ಮಳೆಯಿಂದ ಮಳೆ ನೀರು ಮನೆಯ ಸುತ್ತಮುತ್ತ ಆವರಿಸಿ ಮನೆಯಿಂದ ಹೊರಕ್ಕೆ ಬರಲಾಗದ ಸನ್ನಿವೇಶ ಶಿವಮೊಗ್ಗ ನಗರದ ಗಂಧರ್ವ ಬಡಾವಣೆಯಲ್ಲಿ ನಿರ್ಮಾಣವಾಗಿತ್ತು. ಇಂತಹ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮನೆಯೊಂದರಲ್ಲಿದ್ದ ಇಬ್ಬರನ್ನ ನೀರಿನ ನಡುವೆ ಹೊರಕ್ಕೆ ಸುರಕ್ಷಿತ ಸ್ಥಳಕ್ಕೆ ಕರೆತಂದು ರಕ್ಷಣೆ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಶ್ರಮದ ಫೋಟೋಗಳು ಇದೀಗ ವೈರಲ್ ಆಗುತ್ತಿದ್ದು, ಅವರ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಕೆರೆಕೋಡಿ ನೀರಿಗೆ ಉರುಳಿದ ಕಾರು
ಸೊರಬದಲ್ಲಿ ಧಾರಾಕಾರವಾಗಿ ಸುರಿದ ಪರಿಣಾಮ ಬಹುತೇಕ ಕೆರೆಗಳು ಕೋಡಿ ಬಿದ್ದಿವೆ. ಕೆರೆಗಳು ತುಂಬಿದ ಪರಿಣಾಮ ಹಲವು ಕೆರೆಕೋಡಿಗಳಲ್ಲಿ ಮೀನು ಹಿಡಿದು ತರುತ್ತಿದ್ದಾರೆ. ತಾಲೂಕಿನ ವರದಾ, ದಂಡಾವತಿ ನದಿಗಳು ತುಂಬ ಹರಿಯುತ್ತಿವೆ. ಕೆರೆಕೋಡಿಯ ನೀರು ಎಲ್ಲೆಂದರಲ್ಲಿ ಗದ್ದೆಗೆ ನುಗ್ಗುತ್ತಿದೆ. ಇದರಿಂದ ಭತ್ತದ ಬೆಳೆಗೆ ಹಾನಿಯಾಗುವ ಸಂಭವ ಹೆಚ್ಚಿದೆ ಎಂದು ಸ್ಥಳೀಯರು ಅಂದಾಜಿಸಿದ್ಧಾರೆ. ಇನ್ನೂ ಸೊರಬ-ಶಿರಾಳಕೊಪ್ಪ ಮುಖ್ಯ ರಸ್ತೆಯಲ್ಲಿ ನಿನ್ನೆ ದಿನ ಸೋಮವಾರ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸ್ಥಳೀಯವಾಗಿ ಹರಿಯುವ ಕೆರೆಕೋಡಿಗೆ ಬಿದ್ದಿತ್ತು. ಅದೃಷ್ಟಕ್ಕೆ ಯಾವುದೇ ಅಪಾಯ ಸಂಭವಿಸಲಿಲ್ಲ.
SUMMARY | Details of rain damage in Soraba taluk, Holehonnur, Arahattolu, Soraba-Shiralakoppa road, Shivamogga in Shivamogga district
KEYWORDS | Details of rain damage, Soraba taluk, Holehonnur, Arahatholau, Soraba-Shiralakoppa road, Shivamogga ,Shivamogga district,