SHIVAMOGGA | MALENADUTODAY NEWS | ಮಲೆನಾಡು ಟುಡೆ Oct 18, 2024
ಶಿವಮೊಗ್ಗದಲ್ಲಿ ಖಾಸಗಿ ಬಸ್ಗಳ ಸಿಬ್ಬಂದಿ ನಡುವಿನ ಸ್ಪರ್ಧೆ ಹೊಸದೇನಲ್ಲ. ಸದ್ಯ ಈ ವಿಚಾರ ತಾರಕ್ಕೇರಿ ಓರ್ವನಿಗೆ ಥಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಸ್ ಟೈಮಿಂಗ್ಸ್ ವಿಚಾರದಲ್ಲಿ ಎರಡು ಖಾಸಗಿ ಬಸ್ ಸಿಬ್ಬಂದಿಗಳ ನಡುವೆ ಜಗಳವಾಗಿದೆ.
ಒಂದು ಬಸ್ ಶೃಂಗೇರಿಯಿಂದ ವಯಾ ತೀರ್ಥಹಳ್ಳಿ ಶಿವಮೊಗ್ಗಕ್ಕೆ ಬರುವ ಬಸ್ ಆಗಿದೆ. ಇನ್ನೊಂದು ಬಸ್ ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುವ ರೂಟ್ ಬಸ್ ಆಗಿದೆ. ಈ ಬಸ್ನ ಸಿಬ್ಬಂದಿಗಳು ತೀರ್ಥಹಳ್ಳಿಯಲ್ಲಿ ಜಗಳವಾಡಿಕೊಂಡಿದ್ದಾರೆ.
ಆ ಬಳಿಕ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಪುನಃ ಜಗಳವಾಗಿದ್ದು ಈ ವೇಳೆ ಓರ್ವನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿದೆ. ಸದ್ಯ ಈ ವಿಚಾರದ ಕುರಿತಾಗಿ ದೊಡ್ಡಪೇಟೆ ಪೊಲೀಸ್ ಠಾಣೆ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.
SUMMARY | A scuffle broke out between the staff of private buses on the Thirthahalli-Shivamogga route. Shivamogga Bus Stand, Sringeri, Thirthahalli, Shivamogga,
KEYWORDS | scuffle broke out between the staff of private buses , Thirthahalli-Shivamogga route, Shivamogga Bus Stand, Sringeri, Thirthahalli, Shivamogga,