SHIVAMOGGA | MALENADUTODAY NEWS | ಮಲೆನಾಡು ಟುಡೆ Oct 20, 2024
ಬೆಂಗಳೂರು ಪೊಲೀಸರು ಭೇದಿಸಿದ ಪ್ರಕರಣವೊಂದು ಇದೀಗ ಶಿವಮೊಗ್ಗದಲ್ಲಿ ಕುತೂಹಲ ಮೂಡಿಸುತ್ತಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕಮ್ಮರಡಿ ಹನೀಫನ ಸಹೋದರ ಕಮ್ಮರಡಿ ಹಮ್ಜಾ ಈ ಪ್ರಕರಣದಲ್ಲಿರುವುದು ಹಾಗೂ ಕೆಜಿಗಟ್ಟಲೇ ಚಿನ್ನದ ವಿಚಾರ ಪ್ರಕರಣದ ಕುತೂಹಲಕ್ಕೆ ಕಾರಣವಾಗಿದೆ.
ಹೌದು ಬೆಂಗಳೂರು ಸಮೀಪದ ಮಾಗಡಿ ಠಾಣೆ ಪೊಲೀಸರು ಕಳವು ಪ್ರಕರಣವೊಂದರಲ್ಲಿ ತೀರ್ಥಹಳ್ಳಿಗೆ ಬಂದಿದ್ದಾರೆ. ಇಲ್ಲಿರುವ ಗುಡ್ಡೇಕೇರಿಯ ಅಮೀರ್ ಹಮ್ಜಾನ ಮನೆಯಲ್ಲಿ ತಲಾಶ್ ಮಾಡಿದ್ದ ಪೊಲೀಸರು ಬೆಟ್ಟಮಕ್ಕಿಯಲ್ಲಿ ಆತ ಹೂತಿಟ್ಟಿದ್ದ ಚಿನ್ನ ಜಪ್ತಿ ಮಾಡಿದ್ದಾರೆ.
ಮಾಗಡಿಯಲ್ಲಿ ಕಳ್ಳತನ ಪ್ರಕರಣವೊಂದು ನಡೆದಿತ್ತು. ಈ ಸಂಬಂಧ ಪೊಲೀಸರು ಹಮ್ಜಾನನ್ನ ವಶಕ್ಕೆ ಪಡೆದಿದ್ದರು. ಆತನನ್ನ ಬೆಟ್ಟಮಕ್ಕಿಗೆ ಕರೆದೊಯ್ದು ಆತ ಹೂತಿಟ್ಟಿದ್ದ ಚಿನ್ನವನ್ನ ಜಪ್ತು ಮಾಡಿದ್ದಾರೆ.
ಒಂದು ಕೆಜಿಗೂ ಹೆಚ್ಚು ತೂಕದ ಚಿನ್ನವನ್ನ ಈತ ಕದ್ದು ಹೂತಿಟ್ಟಿದ್ದ ಎನ್ನಲಾಗಿದೆ. ಈತನ ವಿರುದ್ಧ 80 ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ರಾಜ್ಯಮಟ್ಟದ ಮಾಧ್ಯಮಗಳು ವರದಿ ಮಾಡಿವೆ.
SUMMARY | A case cracked by the Bengaluru police is now creating curiosity in Shivamogga. Kammardi Hamza, brother of Theerthahalli Kammaradi Haneef of Shivamogga district, is involved in the case and the gold weighing kilograms is a matter of curiosity in the case.
KEYWORDS | case cracked by the Bengaluru police, creating curiosity in Shivamogga, Kammardi Hamza, Kammaradi Haneef,