ಡಿಸೆಂಬರ್‌ 31 ರಿಂದ ಓಡಲ್ಲ KSRTC ಬಸ್‌? | ಸರ್ಕಾರದ ನಡೆ ಮೇಲೆ ಎಲ್ಲಾ ನಿಂತಿದೆ!

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 28, 2024 ‌‌ 

ಹೊಸವರ್ಷದ ಆರಂಭಕ್ಕೂ ಒಂದು ದಿನ ಮೊದಲೇ ಅಂದರೆ ಡಿಸೆಂಬರ್‌ 31 ರಿಂದ ರಾಜ್ಯ ರಸ್ತೆ ಸಾರಿಗೆ ನಿಮಗದ ನೌಕರರು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್‌ 31 ರಿಂದ KSRTC ಬಸ್‌ಗಳ ಓಡಾಟ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಈ ಸಂಬಂಧ ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿದ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸದಸ್ಯರು ತಮ್ಮ ಪ್ರತಿಭಟನೆಗೂ ಮೊದಲೇ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ. 

ವೇತನ ಪರಿಷ್ಕರಣೆ ಹಾಗೂ ಪರಿಷ್ಕೃತ ವೇತನದ ಬಾಕಿ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸರ್ಕಾರದ ಮುಂದಿಟ್ಟಿದೆ. ಈ ಸಂಬಂಧ ಸಚಿವ ದಿನೇಶ್‌ ಗುಂಡೂರಾವ್‌ ನೇತೃತ್ವದ ನಿಯೋಗಕ್ಕೆ ಮುಷ್ಕರದ ನೋಟಿಸ್‌ ನೀಡಲಾಗಿದ್ದು, ಇದುವರೆಗೂ ಸರ್ಕಾರ ತಮ್ಮ ಬೇಡಿಕೆಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಕಾಂಗ್ರೆಸ್‌ ಸರ್ಕಾರ ನೌಕರರ ವೇತನವನ್ನು ಪರಿಷ್ಕರಣೆ ಮಾಡುತ್ತಿಲ್ಲ ಎಂದು ಸಮಿತಿ ಸದಸ್ಯರು ಆರೋಪಿಸಿದ್ದಾರೆ. 

SUMMARY | KSRTC employees strike from December 31

KEY WORDS |  KSRTC employees strike, December 31

Share This Article