SHIVAMOGGA | MALENADUTODAY NEWS | ಮಲೆನಾಡು ಟುಡೆ Oct 17, 2024
ಶಿವಮೊಗ್ಗ | ಇಲ್ಲಿನ ಕೇಂದ್ರ ಕಾರಾಗೃಹದಿಂದ ತಮ್ಮ ಪತಿ ಫೋನ್ ಕಾಲ್ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಅಂತಾ ಮಹಿಳೆಯೊಬ್ಬರು ಇತ್ತೀಚೆಗೆ ತುಂಗಾ ನಗರ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಆಕೆಯೇ ಪತಿಯ ಶಿಕ್ಷೆಗೆ ಸಂಬಂಧಿಸಿದ ದಂಡದ ಹಣವನ್ನು ಕೋರ್ಟ್‌ಗೆ ಕಟ್ಟಿ, ಜೈಲಿನಿಂದ ಪತಿಯನ್ನ ಬಿಡಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಚಿತ್ರದುರ್ಗ ಮೂಲದ ವ್ಯಕ್ತಿಯೊಬ್ಬರ ಪತ್ನಿ ತಮಗೆ ತಮ್ಮ ಪತಿ ಕರೆ ಮಾಡಿ ದುಡ್ಡು ಕೊಡು ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ತುಂಗಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನನ್ವಯ ಎಫ್‌ಐಆರ್ ಆಗಿತ್ತು. ಇದರ ನಡುವೆ ಪ್ರಕರಣದ ಆರೋಪಿ ಈ ಹಿಂದೆ ದಾಖಲಾಗಿದ್ದ ಕೇಸ್‌ನಲ್ಲಿ ಒಂದು ವರ್ಷ ಜೈಲು ಶಿಕ್ಷೆಯ ಅವಧಿಯನ್ನ ಮುಗಿಸಿದ್ದಾನೆ. ಆದರೆ ಕೋರ್ಟ್ ವಿಧಿಸಿದ್ದ 2500 ರೂಪಾಯಿ ದಂಡ ಕಟ್ಟಿರಲಿಲ್ಲ.
ಚಿತ್ರದುರ್ಗ ಜೈಲ್‌ನಿಂದ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆಗೊಂಡಿದ್ದ ಈತ ಕಟ್ಟಬೇಕಿದ್ದ ದಂಡವನ್ನು ಇದೀಗ ಆತನ ಪತ್ನಿಯೇ ಕಟ್ಟಿದ್ದಾಳೆ. ಕೋರ್ಟ್‌ಗೆ ದಂಡ ಪಾವತಿಸಿ ಪತಿಯನ್ನ ಬಂದಮುಕ್ತಗೊಳಿಸಿದ್ದಾರೆ. ಕಳೆದ ನಾಲ್ಕು ದಿನದ ಹಿಂದೆ ಆತ ಬಿಡುಗಡೆಯಾಗಿದ್ದಾನೆ ಎಂದು ತಿಳಿದುಬಂದಿದೆ.
SUMMARY | Shimoga Central Jail Phone Call Case and Tunganagar Police Station Case, Chitradurga Holalkere Couple
KEYWORDS | Shimoga Central Jail Phone Call Case, Tunganagara Police Station Case, Chitradurga Holalkere Couple