SHIVAMOGGA | MALENADUTODAY NEWS | ಮಲೆನಾಡು ಟುಡೆ Jan 7, 2025
ರಾಜ್ಯದಲ್ಲಿ ಹೆಎಂಪಿ ವೈರಸ್ ಬಗ್ಗೆ ಈಗಾಗಲೇ ಆರೋಗ್ಯ ಇಲಾಖೆ ಮಹತ್ವದ ಸೂಚನೆ ನಡೆಸಿದೆ. ಇದರ ನಡುವೆ ಶಿವಮೊಗ್ಗದ ಖ್ಯಾತ ಮಕ್ಕಳ ವೈದ್ಯರು ಆಗಿರುವ ಎಂಎಲ್ ಸಿ ಡಾ.ಧನಂಜಯ ಸರ್ಜಿ ಶಿವಮೊಗ್ಗದಲ್ಲಿ ಮಾತನಾಡಿ ಫೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಎಚ್ ಎಂಪಿ ವೈರಸ್ ಬಗ್ಗೆ ವರಿ ಮಾಡುವ ಅವಶ್ಯಕತೆ ಇಲ್ಲ ಎಂದಿರುವ ಅವರು ಇದೊಂದು ಕಾಮನ್ ಆಗಿ ಬಂದು ಹೋಗುವ ಇನ್‌ಪೆಕ್ಷನ್ ಇದಾಗಿದೆ. ಮಾಮೂಲಿ ಕೆಮ್ಮು, ಶೀತ ಜ್ವರವಾಗಿ ಬರುವ ಒಂದು ರೀತಿಯ ವೈರಸ್ ಇದಾಗಿದೆ.
ನಮ್ಮ ಭೋದನಾ ಸಂಸ್ಥೆಯಿಂದ ಸರ್ಜಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಕ್ಕಳ ಸ್ವಾಬ್ ಸ್ಯಾಂಪಲ್‌ನ್ನು ಟೆಸ್ಟ್‌ಗೆ ಕಳುಹಿಸಿದ್ದೆವು. ಸಪ್ಟೆಂಬರ್‌ನಿಂದ ನವೆಂಬರ್‌ವರೆಗೂ ಅಂದರೆ ಮೂರು ತಿಂಗಳಿನಲ್ಲಿ ಐದು ಕೇಸ್ ಪಾಸಿಟಿವ್ ಬಂದಿದೆ. ಆ ನಿಟ್ಟಿನಲ್ಲಿ ಹೆಚ್ಚು ಟೆಸ್ಟ್ ಮಾಡಿದರೆ, ಹೆಚ್ಚು ಕಾಣಿಸುತ್ತದೆ . ಇದೊಂದು ಲೋ ಪ್ರೊಫೈಲ್ ವೈರಸ್ ಆಗಿದೆ. ಇದರ ಬಗ್ಗೆ ಗಾಬರಿಯಾಗುವ ಅವಶ್ಯಕತೆಯಿಲ್ಲ. ಎಲ್ಲೂ ಮಾಸ್ಕ್ ಹಾಕಿಕೊಂಡು ಓಡಾಡುವ ಅವಶ್ಯಕತೆ ಇದೆ.
ಇದೊಂದು ಸಾಮಾನ್ಯ ಸೋಂಕಾಗಿದ್ದು, ಈ ಸೋಂಕು ತಗುಲಿದೆ. ಕೆಮ್ಮು, ಶೀತ, ಜ್ವರ ಬರುತ್ತದೆ, ನಾಲ್ಕೈದು ದಿನಗಳಲ್ಲಿ ಹೋಗುತ್ತದೆ. ಸಣ್ಣ ಮಕ್ಕಳು ಹಾಗೂ ರೋಗ ನಿರೋಧಕ ಶಕ್ತಿ ಇರುದವರು, ಕ್ಯಾನ್ಸರ್ ರೋಗಿಗಳು ಸ್ವಲ್ಪ ಜಾಗೃತೆ ವಹಿಸಿದರೇ ಸಾಕು ಎಂದ ಡಾ.ಧನಂಜಯ್ ಸರ್ಜಿ ಇದಕ್ಕಾಗಿ ಜನರಲ್ ಕೇರ್ ತೆಗೆದುಕೊಂಡರೆ ಸಾಕು ಎಂದಿದ್ದಾರೆ. ವಾತಾವರಣದಲ್ಲಿ ಬೇಕಾದಷ್ಟು ವೈರಸ್‌ಗಳಿದ್ದು, ಅವುಗಳಂತೆ ಇದು ಸಹ ಎಂದಿದ್ದಾರೆ. ಯಾರಿಗೆ ಜ್ವರ, ಕೆಮ್ಮು ಶೀತ ಬಂದರೂ ಸಹ ನಾವು ಅದನ್ನ ಬೇರೆಯವರಿಗೆ ಹರಡದಂತೆ ತಡೆಯಿರಿ ಎನ್ನುತ್ತೇವೆ. ಯಾವುದೇ ಭಯ ಹುಟ್ಟಿಸುವಂತ ಸನ್ನಿವೇಶವೇ ಈಗಿಲ್ಲ ಎಂದು ಹೇಳಿದ ಡಾ.ಧನಂಜಯ್ ಸರ್ಜಿ ಆಗಾಗ ಕೈ ತೊಳೆಯುತ್ತಿರಿ ಎಂದು ಸಲಹೆ ನೀಡಿದರು. ಕೋವಿಡ್ ಪರೀಕ್ಷೆಗೆ ಒಳಪಡಿಸಿದ ಸನ್ನಿವೇಶದಲ್ಲಿ ಈ ವೈರಸ್ ಕಾಣಿಸಿರುವ ರಿಪೋರ್ಟ್ ನಮ್ಮಲ್ಲಿದೆ ಎಂದರು.
ಪೋಷಕರು ಈ ಬಗ್ಗೆ ಗಾಬರಿ ಪಡುವ ಯಾವುದೇ ಅವಶ್ಯಕತೆ ಇಲ್ಲ. ಸೆಪ್ಟೆಂಬರ್ ಟು ನವೆಂಬರ್ ಡಿಸೆಂಬರ್ ತಿಂಗಳಿನಲ್ಲಿ ಸಣ್ಣಮಕ್ಕಳಿಗೆ ತೀರಾ ಸಾಮಾನ್ಯವಾಗಿ ಆರೋಗ್ಯ ಹದಗೆಡುತ್ತದೆ. ಬದಲಾಗುವ ವಾತಾವರಣದಲ್ಲಿ ಅನಾರೋಗ್ಯ ಕಾಡುತ್ತದೆಯಷ್ಟೆ. ಲೋ ಪ್ರೋಫೈಲ್ ವೈರಸ್ ಬಗ್ಗೆ ಭಯಪಡುವ ಸಣ್ಣಸಂಗತಿಯು ಸಹ ಇಲ್ಲ ಎಂದಿದ್ದಾರೆ.
SUMMARY | What did renowned pediatrician Dr. Dhananjay Sarji say about hmpv Human metapneumovirus?
KEY WORDS | What did renowned pediatrician Dr. Dhananjay Sarji, hmpv Human metapneumovirus?