SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 10, 2025
ಕೆ ಎಸ್ ಆರ್ ಟಿ ಸಿ ಬಸ್ಸೊಂದು ಚಾಲಕನ ನಿಯಂತ್ರನ ತಪ್ಪಿ ಮನೆಯ ಮೇಲೆ ಬಿದ್ದ ಘಟನೆ ಬಾಳೆಹೊನ್ನೂರು ಜಯಪುರ ನಡುವಿನ ಮೂರುಗದ್ದೆ, ಜಲದುರ್ಗ ಬಳಿ ನಡೆದಿದೆ.
ಕೆಎಸ್‌ಆರ್‌ಟಿಸಿ ಬಸ್ ಬೆಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿತ್ತು. ಬಸ್‍ನಲ್ಲಿ ಸುಮಾರು 45 ಜನ ಪ್ರಯಾಣಿಸುತ್ತಿದ್ದ ರು.ಆಗ ಜಯಪುರ ಸಮೀಪದ ಮೂರುಗದ್ದೆ, ಜಲದುರ್ಗ ನಡುವೆ ಚಾಲಕನ ನಿಯಂತ್ರಣ ತಪ್ಪಿ ಪುಟ್ಟಪ್ಪ ಪೂಜಾರಿ ಎಂಬುವವರ ಮನೆಯ ಮೇಲೆ ಬಿದ್ದಿದೆ. ಇದರ ಪರಿಣಾಮ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ 30 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಗಂಭೀರ ಗಾಯವಾದ 10 ಜನರನ್ನು ಜಯಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಾಲಕ ವೆಂಕಪ್ಪ ಸೇರಿದಂತೆ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ ಮನೆ ಮೇಲೆ ಬಿದ್ದ ಹೊಡೆತಕ್ಕೆ ಮನೆಯ ಒಳಗಿದ್ದ ಶಾಂತ ಎಂಬುವವರಿಗೆ ಗಾಯಗಳಾಗಿವೆ. ಈ ಹಿನ್ನಲೆ ಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
SUMMARY | A KSRTC bus fell on a house near Jaladurga in Balehonnur and Jayapura.
KEYWORDS | KSRTC, bus, Jaladurga, accident,