SHIVAMOGGA | MALENADUTODAY NEWS | ಮಲೆನಾಡು ಟುಡೆ Jan 9, 2025
ವಿವಾದ ಹಾಗೂ ವಿಳಂಬ ಎರಡಕ್ಕೂ ಕಾರಣವಾಗಿದ್ದ ಶಿವಮೊಗ್ಗದ ಆಶ್ರಯ ಮನೆಗಳ ಹಂಚಿಕೆಗೆ ಸಂಬಂಧಿಸಿದಂತೆ ಇದೀಗ ದಿನಾಂಕ ಫಿಕ್ಸ್ ಆಗಿದೆ. ಈ ಹಿಂದೆ ಶಾಸಕರ ಸಮ್ಮುಖದಲ್ಲಿ ನಡೆದಿದ್ದ ಕಾರ್ಯಕ್ರಮ ದಿಢೀರ್ ರದ್ದಾಗಿತ್ತು. ಈ ವೇಳೇ ಪ್ರತಿಭಟನೆಗಳು ಸಹ ನಡೆದಿದ್ದವು. ಇದೀಗ ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ ನಿರ್ಮಿಸಿರುವ 652 ಆಶ್ರಯ ಮನೆಗಳ ಹಂಚಿಕೆ ಇದೇ ಜನವರಿ 21ರಂದು ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಈ ಸಂಬಂಧ ಸಚಿವ ಜಮೀರ್ ಅಹಮದ್‌ರ ಒಪ್ಪಿಗೆ ಪಡೆಯಲಾಗಿದೆ.
ಆಶ್ರಯ ಮನೆಯ ವಿಚಾರವಾಗಿ ನಿನ್ನೆ ದಿನ ಬುಧವಾರ ಸಚಿವ ಜಮೀರ್ ಅಹಮದ್‌ರವರನ್ನ ಶಿವಮೊಗ್ಗ ಕಾಂಗ್ರೆಸ್ ನಿಯೋಗ ಭೇಟಿ ಮಾಡಿದೆ. ವಿಧಾನಪರಿಷತ್ ಸದಸ್ಯೆ ಬಲ್ಕೀಷ್ ಬಾನು, ಶಿವಮೊಗ್ಗದ ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೇಶ್ ನೇತೃತ್ವದಲ್ಲಿ ಸಚಿವರ ಜೊತೆಗೆ ನಡೆದ ಸಭೆಯಲ್ಲಿ ಆಶ್ರಯ ಮನೆಯ ಹಂಚಿಕೆ ಬಗ್ಗೆ ಚರ್ಚೆ ಮಾಡಲಾಗಿದೆ. ಈ ವೇಳೆ ಮನೆಗಳ ಹಂಚಿಕೆ ದಿನಾಂಕ ನಿಗದಿ ಪಡಿಸಲಾಗಿದೆ. ಇನ್ನೂ ಆಶ್ರಯ ಮನೆಯ ಹಂಚಿಕೆಯ ದಿನ ವಸತಿ ಸಚಿವ ಜಮೀರ್ ಅಹಮದ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಲಾಟರಿ ಎತ್ತಿ ಫಲಾನುಭವಿಗಳಿಗೆ ಮನೆ ಹಂಚುವ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ
SUMMARY | Housing Minister Zameer Ahmed, In-charge Minister Madhu Bangarappa fix date for allotment of ashraya homes in Govindapura and Gopishetty Koppa
KEY WORDS | Housing Minister Zameer Ahmed, In-charge Minister Madhu Bangarappa, date fix for allotment of ashraya homes , Govindapura and Gopishetty Koppa ashraya homes